ಈ ಮಗು ಮತ್ತೊಮ್ಮೆ ಸಾಂಬಾರ್‌ ಕೇಳಿದ್ದೇ ತಪ್ಪಾಯ್ತು, ಇದಕ್ಕೆ ಕೆಲಸದಾಕೆ ಮಾಡಿದ್ದೇನು…?

ಭೋಪಾಲ್‌: ಅನೇಕ ಬಡ ಮಕ್ಕಳು ಶಾಲೆಗೆ ಬರುವುದೇ ಮದ್ಯಾಹ್ನದ ಬಿಸಿಯೂಟಕ್ಕಾಗಿ. ಎಷ್ಟೋ ಮನೆಯಲ್ಲಿ ಹೊತ್ತಿನ ಊಟಕ್ಕೂ ಕಷ್ಟವಿರುವಾಗ ಶಾಲೆಗೆ ಮಕ್ಕಳನ್ನು ಕಳಿಸಿದರೆ ಮದ್ಯಾಹ್ನ ಬಿಸಿಯೂಟ ಸಿಗುತ್ತದೆ ಎಂದು ಮಕ್ಕಳನ್ನು ಪೋಷಕರು ಶಾಲೆಗೆ ಕಳಿಸುತ್ತಾರೆ. ಅಂತೆಯೇ ಒಂದನೇ ತರಗತಿ ಮಗುವೊಂದು ಶಾಲೆಗೆ ಹೋಗಿ ಮದ್ಯಾಹ್ನ ಊಟದ ವೇಳೆ ಎರಡನೇ ಬಾರಿ ದಾಲ್‌ ಹಾಕಿ ಎಂದು ಕೇಳಿದ್ದಕ್ಕೆ ಅಡುಗೆ ಕೆಲಸದಾಕೆ ಬಿಸಿಬಿಸಿ ದಾಲನ್ನು ಮಗುವಿನ ಮುಖದ ಮೇಲೆ ಎರಚಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಡಿನ್‌ ಡೋರಿ ಪ್ರದೇಶದ ಶಾಲೆಯೊಂದರಲ್ಲಿ ನಡೆದಿದೆ.

ಮಗುವನ್ನು ಪ್ರಿನ್ಸ್‌ ಮೆಹ್ರಾ ಎಂದು ಹೆಸರಿಸಲಾಗಿದ್ದು, ದಾಲನ್ನು ಮುಖದ ಮೇಲೆ ಸುರಿದ ಪರಿಣಾಮ ಮಗುವಿನ ಮುಖ, ಎದೆಯ ಭಾಗ ಹಾಗೂ ಹಿಂಭಾಗ ಸುಟ್ಟು ಹೋಗಿದ್ದು, ಡಿನ್‌ ಡೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದ್ಯಾಹ್ನದ ಬಿಸಿಯೂಟ ಮಾಡುವಾಗ ಪ್ರಿನ್ಸ್‌, ಅಡುಗೆ ಕೆಲಸದಾಕೆಯ ಬಳಿ ಎರಡನೇ ಬಾರಿಗೆ ದಾಲ್‌ ಹಾಕುವಂತೆ ಕೇಳಿದ್ದಾನೆ. ಈ ವೇಳೆ ಸಿಟ್ಟಿಗೆದ್ದ ಕೆಲಸದಾಕೆ ಮಗುವಿನ ಮುಖ ಮೇಲೆ ಬಿಸಿ ದಾಲ್‌ ಸುರಿದಿರುವುದಾಗಿ ಬಾಲಕನ ಪೋಷಕರು ಆರೋಪಿಸಿದ್ದಾರೆ.

ಜನವರಿ 23ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆಕೆಯ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್‌ ಮೂಲಗಳು ಹೇಳಿವೆ.

 

Leave a Reply

Your email address will not be published.

Social Media Auto Publish Powered By : XYZScripts.com