ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ನೀಡಿದ KSRTC : ಸಾಕು ಪ್ರಾಣಿಗಳಿಗೂ ಬಸ್‌ನಲ್ಲಿ ಅವಕಾಶ..!!

ಬೆಂಗಳೂರು : ಕೆಎಸ್‌ಆರ್‌ಟಿಸಿ ಏಜೆನ್ಸಿ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಒಂದನ್ನು ನೀಡಿದೆ. ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವವರು ನಿಮ್ಮ ಮನೆಯಲ್ಲಿನ ಸಾಕು ಪ್ರಾಣಿಗಳನ್ನೂ ಕರೆದೊಯ್ಯಬಹುದಾಗಿದೆ.

ನಾವು ಕರೆದೊಯ್ಯುವ ಪ್ರಾಣಿಗೆ ಒಬ್ಬ ವ್ಯಕ್ತಿಯ ಟಿಕೆಟ್‌ ಪಡೆಯಬೇಕಾಗುತ್ತದೆ. ಅಲ್ಲದೆ ಇನ್ಮುಂದೆ ಬಸ್‌ನಲ್ಲಿ ಯದ್ವಾ ತದ್ವಾ ಲಗೇಜ್‌ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಒಬ್ಬ ವ್ಯಕ್ತಿ 30 ಕೆ.ಜಿ ಹಾಗೂ ಮಕ್ಕಳಿಗೆ15 ಕೆ.ಜಿ ಲಗೇಜ್‌ ಕೊಂಡೊಯ್ಯಬಹುದು. ಆದರೆ ಇದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಕು ಪ್ರಾಣಿಗಳನ್ನು ಬಸ್‌ನಲ್ಲಿ ಕೊಂಡೊಯ್ದರೆ ಆರಾಮದಾಯಕ ವಾತಾವರಣ ಇರುವುದಿಲ್ಲ. ಅಲ್ಲದೆ ಮಕ್ಕಳು , ಮಹಿಳೆಯರಿಗೆ ಕಿರಿಕಿರಿ ಎನಿಸುತ್ತದೆ ಎಂದಿದ್ದಾರೆ.

 

Leave a Reply

Your email address will not be published.