U-19 WC : ಸೆಮಿಫೈನಲ್ ಸೋಲಿನ ಬಳಿಕ Pak ಫ್ಯಾನ್ಸ್ Dravid ಬಗ್ಗೆ ಹೇಳಿದ್ದೇನು..?

ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ಪಂದ್ಯಾವಳಿಯಲ್ಲಿ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ 203 ರನ್ ಗಳ ಭರ್ಜರಿ ಜಯಗಳಿಸಿದೆ. ಈ ಮೂಲಕ ಪೃಥ್ವಿ ಶಾ ನೇತೃತ್ವದ ಭಾರತ ಕಿರಿಯರ ತಂಡ ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಅಂಡರ್-19 ಭಾರತ ತಂಡದ ಯಶಸ್ಸಿನ ಹಿಂದೆ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಪಾತ್ರವೂ ಮಹತ್ವದ್ದಾಗಿದೆ.

ತಮ್ಮ ತಂಡದ ಸೋಲಿನಿಂದ ನಿರಾಶೆಗೊಂಡಿರುವ ಪಾಕ್ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ ಭಾರತದ ಕಿರಿಯರಿಗೆ ರಾಹುಲ್ ದ್ರಾವಿಡ್ ರಂತಹ ಶ್ರೇಷ್ಟ ಕೋಚ್ ಮಾರ್ಗದರ್ಶನವಿದೆ. ಹಾಗಾಗಿ ಟೀಮ್ ಇಂಡಿಯಾ ಯಶಸ್ಸು ಗಳಿಸುತ್ತಿದೆ, ಭಾರತ ಹಾಗೂ ಪಾಕ್ ತಂಡಗಳ ನಡುವಿನ ವ್ಯತ್ಯಾಸ ದ್ರಾವಿಡ್, ಅಷ್ಟೇ ‘ ಎಂದಿದ್ದಾರೆ.

ಕೆಲದಿನಗಳ ಹಿಂದೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ರಮೀಜ್ ರಾಜಾ ‘ ಪಾಕಿಸ್ತಾನಕ್ಕೆ ರಾಹುಲ್ ದ್ರಾವಿಡ್ ಅವರಂತಹ ಕೋಚ್ ನೇಮಕ ಮಾಡುವ ಅಗತ್ಯವಿದೆ ‘ ಎಂದು ಹೇಳಿದ್ದರು.

 

 

 

 

 

Leave a Reply

Your email address will not be published.