ದೀಪಕ್‌ ಕೊಂದಿದ್ದು ನಮ್ಮ ಹುಡುಗರೇ..ಏನಿವಾಗ ? : BJP ಮುಖಂಡ C.T ರವಿಗೆ ಜೀವ ಬೆದರಿಕೆ

ಚಿಕ್ಕಮಗಳೂರು : ಬಿಜೆಪಿ ಮುಖಂಡ ಸಿ.ಟಿ ರವಿ ಅವರಿಗೆ ಕೊಲೆ ಬೆದರಿಕೆ ಬಂದಿದೆ. ರೌಡಿ ಪರ್ವೇಜ್‌ ಎಂಬ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿದ್ದು, ರವಿಯವರನ್ನು ಹತ್ಯೆ ಮಾಡುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.

ಗೌರಿ ಲಂಕೇಶ್‌ ಹತ್ಯೆ ಮಾಡಿರುವುದು, ಕಲ್ಬುರ್ಗಿ ಅವರ ಹತ್ಯೆ ಮಾಡಿರುವುದು ಆರ್‌ಎಸ್‌ಎಸ್‌ ಎಂಬುದು ನಮಗೆ ಗೊತ್ತಿದೆ. ದೀಪಕ್‌ ರಾವ್‌ ಹತ್ಯೆ ಹಿಂದೆ ನಮ್ಮ ಕೈವಾಡವಿದೆ ಎಂದು ಪತ್ರದಲ್ಲಿ ಹೇಳಲಾಗಿದ್ದು, ಆರ್‌ಎಸ್‌ಎಸ್‌ನವರು ರಾಜ್ಯದಲ್ಲಿ  ಶಾಂತಿ ಕಾಪಾಡಲು ಬಿಡುತ್ತಿಲ್ಲ. ನಿಮ್ಮಗಳಿಗೆ ಹುಡುಗರ ಜೊತೆ ಬಡಿದಾಡಲು ತಾಕತ್ತಿಲ್ಲ. ದೀಪಕ್‌ ಕೊಂದಿದ್ದು ನಮ್ಮ ಹುಡುಗರೇ. ಮುಸ್ಲಿಂ ಯುವಕರಿಗೆ ತೊಂದರೆ ನೀಡುವುದನ್ನು ಮೊದಲು ಬಿಡಿ ಎಂದಿದ್ದು,  ಬಿಜೆಪಿ ನಾಯಕರ ಬಗ್ಗೆ ಅಸಭ್ಯ ಪದ ಬಳಕೆ ಮಾಡಲಾಗಿದೆ. ಬೆಂಗಳೂರಿನ ಅಲ್ಲೇ ಹಾಯೀಸ್‌ ಗ್ರೂಪ್‌ ಆಫ್‌ ಕರ್ನಾಟಕ ಹೆಸರಿನಲ್ಲಿ ಪತ್ರ ಬರೆಯಲಾಗಿದೆ.

ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಸಿ.ಟಿ ರವಿ, ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಅವರಿಗೆ ದೂರು ನೀಡಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com