ವಿದ್ಯಾರ್ಥಿನಿ ಪೂಜಾ ಕೊಲೆ ಖಂಡಿಸಿ ಬೀದರ್ ಬಂದ್ : ಪೊಲೀಸರಿಂದ ಲಾಠಿ ಚಾರ್ಜ್
ಬೀದರ್ : ವಿದ್ಯಾರ್ಥಿನಿ ಪೂಜಾ ಹಡಪದ್ ಹತ್ಯೆ ಪ್ರಕರಣ ಸಂಬಂಧ ಬೀದರ್ನಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಹಿಂದೂಪರ ಸಂಗಟನೆಗಳು ನೀಡಲಾಗಿದ್ದ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಸ್, ಆಟೋ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ದೂರದೂರಿಗೆ ಪ್ರಯಾಣಿಸಬೇಕಿದ್ದವರು ಪರದಾಡುವಂತಾಗಿದೆ. ಇನ್ನು ಅನೇಕ ಕಡೆ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ಇನ್ನು ಬೀದರ್ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಘಟನೆಯಲ್ಲಿ ಸಂಸದ ಭಗವಂತ್ ಖೂಬಾ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಇನ್ನು ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ವ್ಯಾಪಕ ಬಂದೋಬಸ್ತ್ ಹಮ್ಮಿಕೊಳ್ಳಲಾಗದೆ.
ಖಾಸಗಿ ಕಾಲೇಜಿನನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ವಿದ್ಯಾರ್ಥಿನಿ ಪೂಜಾಳನ್ನು ಬಾಲ್ಕಿ ತಾಲ್ಲೂಕಿನ ಗಾಯಮುಖ ಅರಣ್ಯ ಪ್ರದೇಶದಲ್ಲಿ ಶನಿವಾರ ಸಂಜೆ ಅತ್ಯಾಚಾರವೆಸಗಿ ಬಳಿಕ ಪೂಜಾಳ ಕುತ್ತಿಗೆ ಕೊಯ್ದು ಹತ್ಯೆ ಮಾಡಲಾಗಿತ್ತು. ಇನ್ನು ಈ ಘಟನೆಗೆ ಕಾರಣನಾದ ಕೋಸಂ ಗ್ರಾಮದ ಶಂಸುದ್ದೀನ್ (24) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.