ಸೂರ್ಯ ಹುಟ್ಟೋದು ಎಷ್ಟು ಸತ್ಯಾನೋ ಸಿದ್ದರಾಮಯ್ಯ CM ಆಗೋದು ಅಷ್ಟೇ ಸತ್ಯ : V.S ಉಗ್ರಪ್ಪ

ಬೆಳಗಾವಿ : ಪ್ರಧಾನಿ ಮೋದಿ ಮನಸ್ಸು ಮಾಡಿದರೆ ಮಹದಾಯಿ ಸಮಸ್ಯೆಯನ್ನು ಸುಲಭವಾಗಿ ಇತ್ಯರ್ಥ ಮಾಡಬಹುದು ಆದರೆ ಪ್ರಧಾನಿ ಮೋದಿ ಮಾತ್ರ ಮೌನಿ ಬಾಬಾ ಆಗಿದ್ದಾರೆ  ಎಂದು ವಿಧಾನ ಪರಿಷತ್ ಸದಸ್ಯ ವಿ ಎಸ್ ಉಗ್ರಪ್ಪ ಹೇಳಿದ್ದಾರೆ.
ಇಂದು ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ ಒಕ್ಕೂಟದ ವ್ಯವಸ್ಥೆಯನ್ನು ಪ್ರಧಾನಿ ಅರ್ಥ ಮಾಡಿಕೊಳ್ಳಬೇಕು. ಆದರೆ ಅದನ್ನು ಮಾಡ್ತಾ ಇಲ್ಲಾ‌ ಜನರ ಸಮಸ್ಯೆಗೆ ಸ್ಪಂದಿಸಲು ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿದರು. ಇನ್ನು ಗೋವಾ ಸರ್ಕಾರ ಪ್ರೋಟೊಕಾಲ್ ಉಲ್ಲಂಘನೆ ಮಾಡಿ ಉದ್ದಟತನ ಮಾಡ್ತಾ ಇದೆ. ಅವರು ಮಾಡ್ತಾರೆ ಅಂತ ನಾವು ಉದ್ದಟತನ ಮಾಡಿದರೆ ದೇಶದ ಜನತೆಯ ಮುಂದೆ ನಗಪಾಟಲು ಆಗುತ್ತೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಎಲ್ಲರೂ ಒಂದೆ ಎನ್ನು ಭಾವನೆ ಇಟ್ಟಕೊಳ್ಳಬೇಕು ಅಂದಾಗ ಮಾತ್ರ ಒಕ್ಕೂಟ ವ್ಯವಸ್ಥೆಗೆ ಬೆಲೆ ಬರುತ್ತದೆ ಎಂದರು.

ಈಗಾಗಲೆ ಕಾನೂನಿನ ಚೌಕಟ್ಟನಲ್ಲಿ ಸಿದ್ದರಾಮಯ್ಯ ಸರ್ಕಾರ ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಿದೆ. ಅದರೆ ಇದಕ್ಕೆ ಕೆಂದ್ರ ಸರ್ಕಾರ ಸಹ ಮಧ್ಯಸ್ಥಿಕೆ ವಹಿಸಿ ಮಹದಾಯಿ ವಿಚಾರಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಇನ್ನು ಒವೈಸಿ ಒಪ್ಪಂದ ಬಿಜೆಪಿಗೆ ಸಹಾಯ ಆಗೋ ದೃಷ್ಠಿಯಲ್ಲಿ ನಡೆದುಕೊಂಡಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿ ಅವರು ಏನು ಬೇಕಾದ್ರೂ ಮಾಡ್ತಾರೆ. ಆದರೆ ಬಿಜೆಪಿ ಅವರು ಏನೇ ಮಾಡಿದರು ಈ ರಾಜ್ಯದ ಜನರು ಮಾತ್ರ ಸ್ಪಷ್ಟವಾದ ಬಹುಮತವನ್ನು ಕಾಂಗ್ರೆಸ್ ಗೆ ಕೊಡುವುದರಲ್ಲಿ ಎರಡು ಮಾತಿಲ್ಲ. ಸೂರ್ಯ ಹುಟ್ಟುವದು ಎಷ್ಟು ಸತ್ಯವೋ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬರೋದು ಸಹ ಅಷ್ಟೇ ಸತ್ಯ ಎಂದು ಹೇಳಿದರು…

Leave a Reply

Your email address will not be published.

Social Media Auto Publish Powered By : XYZScripts.com