ಹೆಂಡತಿ ಎಂದರೆ ನನಗೆ ಭಯ, Divorce ಕೊಡಿಸಿ ಪ್ಲೀಸ್‌ : ಕೋರ್ಟ್‌ನಲ್ಲೇ ಕಣ್ಣೀರಿಟ್ಟ ಪತಿ

ಬೆಂಗಳೂರು : ನನಗೆ ನನ್ನ ಹೆಂಡತಿ ಎಂದರೆ ತುಂಬಾ ಭಯ. ಆಕೆ ನನಗೆ ಹೊಡೆಯುತ್ತಾಳೆ. ಅವಳ ಜೊತೆ ಬದುಕಲು ನನಗೆ ಸಾಧ್ಯವಿಲ್ಲ. ದಯವಿಟ್ಟು ನನಗೆ ವಿಚ್ಛೇದನ ಕೊಡಿಸಿ ಎಂದು ಟೆಕ್ಕಿ ಪತಿಯೊಬ್ಬ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಅಮೆರಿಕದಲ್ಲಿ ನೆಲೆಸಿರುವ ಬೆಂಗಳೂರಿನ ಟೆಕ್ಕಿಯೊಬ್ಬರು ನನಗೆ ನನ್ನ ಹೆಂಡತಿಯನ್ನು ಕಂಡರೆ ಭಯ. ಆಕೆ ನನಗೆ ಹೊಡೆಯುತ್ತಾಳೆ. ಅವಳನ್ನು ನೋಡಿದರೆ ನನಗೆ ಭಯವಾಗುತ್ತದೆ. ಆದ್ದರಿಂದ ನನಗೆ ಡೈವೋರ್ಸ್‌ ಕೊಡಿಸಿ ಎಂದು ಕಣ್ಣೀರಿಟ್ಟಿದ್ದಾರೆ.

ನೀವಿಬ್ಬರೂ ಸ್ವಲ್ಪ ಹೊತ್ತು ಕಬ್ಬನ್‌ ಪಾರ್ಕ್‌ನಲ್ಲಿ ಕುಳಿತು ಮಾತನಾಡಿ ಎಂದು ಹೈಕೋರ್ಟ್‌ ಸೂಚಿಸಿದಾಗ, ನಾನು ಅವಳ ಜೊತೆ ಹೋಗುವುದಿಲ್ಲ. ಬೇಕಾದರೆ ಇಲ್ಲೇ ಕುಳಿತು ಮಾತನಾಡುತ್ತೇನೆ ಎಂದು ಟೆಕ್ಕಿ ಹೇಳಿದ್ದು, ಬಳಿಕ ಇಬ್ಬರೂ ಕೋರ್ಟ್‌ ಆವರಣದಲ್ಲೇ ಕುಳಿತು ಮಾತುಕತೆ ಮಾಡಿದ್ದಾರೆ.

ಇನ್ನು ಈ ಕುರಿತು ನ್ಯಾಯಾಧೀಶರು ಹೇಳಿಕೆ ನೀಡಿದ್ದು, ಭಾವನೆಗಳು ಬೆರೆತಾಗ ಮಾತರ ಗಂಡ-ಹೆಂಡತಿ ಸಂಸಾರ ಸಾಗಿಸಲು ಸಾಧ್ಯವಾಗುತ್ತದೆ. ಗಂಡ ಅಮೆರಿಕದಲ್ಲಿ ಇದ್ದರೂ ಅಲ್ಲಿಂದಲೇ ಪ್ರೀತಿಯಿಂದಿರುವುದನ್ನು ನೋಡಿದ್ದೇವೆ. ನೀವಿಬ್ಬರೂ ಒಮ್ಮೆ ಕೌನ್ಸಿಲಿಂಗ್‌ ಮಾಡಿಸಿಕೊಳ್ಳಿ. ಪ್ರೀತಿ ಇಲ್ಲದವರ ಜೊತೆ ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ.

ಅಲ್ಲದೆ ಬುದ್ದಿವಾದ ಹೇಳಿದ ಜಡ್ಜ್‌ ಕೊನೆಗೆ ಮಧ್ಯಸ್ಥಿಕಾ ಕೇಂದ್ರಕ್ಕೆ ತೆರಳಿ ಸಮಸ್ಯೆ ಬಗೆಹರಿಸಿಕೊಳ್ಳಿ. ಅಲ್ಲಿಯೂ ಪರಿಹಾರ ಸಿಗದಿದ್ದರೆ ಮತ್ತೆ ಬನ್ನಿ ಎಂದು ಪ್ರಕರಣವನ್ನು ಮುಂದೂಡಿದ್ದಾರೆ.

Leave a Reply

Your email address will not be published.