ಇನ್ನೆಂದೂ ವಿಮಾನ ಏರೋದಿಲ್ವಂತೆ ಈ ಫಿಟ್ನೆಸ್‌ ಸುಂದರಿ…ಕಾರಣ ಕೇಳಿದ್ರೆ ದಂಗಾಗ್ತೀರಾ..!!

ಮಾಡೆಲ್‌ ಒಬ್ಬಳು ವಿಮಾನ ಸಿಬ್ಬಂದಿಯೊಂದಿಗೆ ಕಿರಿಕ್‌ ಮಾಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರ ಸಹಾಯದಿಂದ ಆಕೆಯನ್ನು ವಿಮಾನದಿಂದ ಹೊರದಬ್ಬಿರುವ ಘಟನೆ ನಡೆದಿದೆ. ಇದರಿಂದ ನೊಂದಿರುವ ಮಾಡೆಲ್ ತಾನು ಇನ್ನೆಂದೂ ವಿಮಾನ ಏರುವುದಿಲ್ಲ ಎಂದು ಶಪಥ ಮಾಡಿದ್ದಾಳೆ.

ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪೊಲೀಸರಿಂದ ಹೊರದಬ್ಬಿಸಿಕೊಂಡ ಮಾಡೆಲ್‌ ಜೆನ್‌ ಸೆಟ್ಲರ್‌ ಎಂದು ತಿಳಿದುಬಂದಿದೆ. ಈಕೆ ತಮ್ಮ ಸಹೋದರಿಯೊಂದಿಗೆ ನ್ಯಾಯಾರ್ಕ್‌ಗೆ ತೆರಳುವ ಸಲುವಾಗಿ ಅಮೆರಿಕನ್‌ ಅರ್ಲೈನ್ಸ್‌ ವಿಮಾನ ಏರಿದ್ದಾರೆ. ನಿಗದಿತ ಅವದಿ ಮೀರಿದರೂ ವಿಮಾನ ಟೇಕಾಫ್‌ ಆಗದ ಕಾರಣ ಜೆ್ ಸೆಟ್ಲರ್‌ ವಿಮಾನ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ವಿಮಾನ ಸಿಬ್ಬಂದಿ ಆಕೆಯನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಸುಮ್ಮನಿರದ ಜೆನ್‌ಳನ್ನು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ವಿಮಾನದಿಂದ ಹೊರದಬ್ಬಿದ್ದಾರೆ. ತಮ್ಮ ಜೊತೆ ಸಿಬ್ಬಂದಿ ಅವಮಾನಕರವಾಗಿ ನಡೆದುಕೊಂಡಿದ್ದಾರೆ ಎಂದು ಜೆನ್ ಆರೋಪಿಸಿದ್ದು, ಇನ್ನೆಂದೂ ಅಮೆರಿಕನ್‌ ಏರ್ಲೈನ್ಸ್‌ ಏರುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com