ಅತ್ಯಾಚಾರಿಯನ್ನು ಮದುವೆಯಾದ ಸಂತ್ರಸ್ತೆಗೆ ಗಂಡನಿಂದ ತ್ರಿವಳಿ ತಲಾಖ್‌ನ ಉಡುಗೊರೆ..!!

ಲಖನೌ : ಅತ್ಯಾಚಾರ ಸಂತ್ರಸ್ತೆ, ತನ್ನ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯನ್ನೇ ಮದುವೆಯಾಗಲಿ ಎಂದು ಉತ್ತರ ಪ್ರದೇಶದ ಸ್ಥಳೀಯ ಪಂಚಾಯತ್‌ ತೀರ್ಪು ನೀಡಿದ್ದು, ಆ ತೀರ್ಪಿನಂತೆ ಅತ್ಯಾಚಾರ ಮಾಡಿದ ವ್ಯಕ್ತಿಯನ್ನೇ ಮದುವೆಯಾದ ಮಹಿಳೆಗೆ ಗಂಡ ತಲಾಖ್‌ ನೀಡಿದ ಘಟನೆ ಉತ್ತರ ಪ್ರದೇಶದ ಹಾಪೂರ್‌ನಲ್ಲಿ ನಡೆದಿದೆ.

ಮಹಿಳೆಯೊಬ್ಬರ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದ. ಬಳಿಕ ಸ್ಥಳೀಯ ಪಂಚಾಯಿತಿ ಮುಖಂಡರು ಅತ್ಯಾಚಾರ ನಡೆಸಿದ ವ್ಯಕ್ತಿಯೇ ಮಹಿಳೆಯನ್ನು ಮದುವೆಯಾಗಬೇಕು ಎಂದು ತೀರ್ಪು ನೀಡಿದ್ದರು. ಇದರಂತೆ ಮಹಿಳೆಗೆ ಅತ್ಯಾಚಾರಿ ಜೊತೆಯೇ ಮದುವೆಯಾಗಿತ್ತು. ಮದುವೆಯಾದ ಬಳಿಕ ಪತಿ ಆಕೆಗೆ ತ್ರಿವಳಿ ತಲಾಖ‌್ ನೀಡಿದ್ದಾನೆ. ಮದುವೆಯಾದ ಬಳಿಕ ಮಗಳಿಗೆ ಆತ ಸಾಕಷ್ಟು  ಹಿಂಸೆ ನೀಡುತ್ತಿರುವುದಾಗಿ ಸಂತ್ರಸ್ತೆ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಪತಿ ಹಾಗೂ ಆತನ ತಂದೆ ನನ್ನನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಒತ್ತಾಯವಾಗಿ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಅಲ್ಲದೆ ಅಲ್ಲಿಯೇ 3 ಬಾರಿ ತಲಾಖ್‌ ಹೇಳಿದ್ದಾರೆ ಎಂದು ಆರೋಪಿಸಿದ್ದು, ಸದ್ಯ ಮಹಿಳೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾಳೆ. ಮಹಿಳೆ ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com