WATCH : ನೃತ್ಯ ಮಾಡುತ್ತಲೇ ವೇದಿಕೆ ಮೇಲೆ ಕೊನೆಯುಸಿರೆಳೆದ ಖ್ಯಾತ ಕಲಾವಿದ…

ತಿರುವನಂತಪುರಂ : ಕೇರಳದ ಖ್ಯಾತ ನೃತ್ಯಪಟು, ನಟ ಕಲಾಮಂಡಲಂ ಗೀತಾನಂದನ್‌ ಅವರು ವೇದಿಕೆ ಮೇಲೆ ಕಾರ್ಯಕ್ರಮ ನೀಡುತ್ತಿರುವಾಗಲೇ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ. ಇವರಿಗೆ 58 ವರ್ಷ ವಯಸ್ಸಾಗಿತ್ತು.

ಭಾನುವಾರ ರಾತ್ರಿ ತ್ರಿಶೂರ್‌ನ ಅವಿತಾತುರ್‌ ಮಹಾವಿಷ್ಣು ದೇವಸ್ಥಾನದಲ್ಲಿ ಒಟ್ಟಂತುಲಾಲ್‌ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಲಾಮಂಡಲಂ ಗೀತಾನಂದನ್‌ ಅವರು ನೃತ್ಯ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅವರು ಕುಸಿದು ಬಿದ್ದಿದ್ದಾರೆ. ಸಹ ಕಲಾವಿದರು ಕೂಡಲೆ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರು ವೇದಿಕೆಯ ಮೇಲೆಯೇ ಪ್ರಾಣ ಬಿಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಗೀತಾನಂದನ್‌ ಅವರು ಒಟ್ಟುತುಲಾಲ್‌ ಕಲಾಮಂಡಲಂನಲ್ಲಿ 25ವರ್ಷಕ್ಕೂ ಹೆಚ್ಚು ವರ್ಷಗಳಿಂದ ಸದಸ್ಯರಾಗಿದ್ದರು. ಅಲ್ಲದೆ ಇವರು ಕಮಲಾದಳಂ, ತೂವಲ್‌ಕೊಟ್ಟರಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com