ಏನಿದು Super Blue Blood Moon.? : ಜನೆವರಿ 31 ರಂದು ಅಪರೂಪದ ಖಗೋಳ ವಿದ್ಯಮಾನ

ಜನೆವರಿ 31 ರಂದು ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನವೊಂದು ಗೋಚರವಾಗಲಿದೆ. ಮೂರು ಭಿನ್ನ ಖಗೋಳ ವಿದ್ಯಮಾನಗಳಾದ ಬ್ಲ್ಯೂ ಮೂನ್, ಸೂಪರ್ ಮೂನ್ ಹಾಗೂ ಬ್ಲಡ್ ಮೂನ್ ಒಟ್ಟಿಗೇ ಸಂಭವಿಸಲಿವೆ. ಇದನ್ನು ‘ ಸೂಪರ್ ಬ್ಲ್ಯೂ ಬ್ಲಡ್ ಮೂನ್ ‘ ಎಂದು ಹೆಸರಿಸಲಾಗಿದೆ.

ಅಮೇರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ NASA ಈ ವಿದ್ಯಮಾನವನ್ನು ‘Lunar Trifecta’ ಎಂದು ಕರೆದಿದೆ. ಭಾರತ, ರಷ್ಯಾ, ಚೀನಾ, ಆಸ್ಟ್ರೇಲಿಯಾ ಹಾಗೂ ಥಾಯ್ಲೆಂಡ್ ಗಳಲ್ಲಿ ಇದು ಕಾಣಿಸಲಿದ್ದು, ಭಾರತದಲ್ಲಿ 36 ವರ್ಷಗಳ ಹಿಂದೊಮ್ಮೆ ಇದು ಕಾಣಿಸಿತ್ತು. 150 ವರ್ಷಗಳ ನಂತರ ಹಲವು ದೇಶಗಳ ಜನರಿಗೆ ಈ ವಿದ್ಯಮಾನ  ನೋಡಲು ಸಿಗಲಿದೆ.

Image result for blue moon

ಬ್ಲ್ಯೂ ಮೂನ್ – ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಹುಣ್ಣಿಮೆ (Full Moon) ಬಂದರೆ ಅದನ್ನು ಬ್ಲ್ಯೂ ಮೂನ್ ಎಂದು ಕರೆಯಲಾಗುತ್ತದೆ. ಇದೇ ಜನೆವರಿ ತಿಂಗಳ 1 ರಂದು ಹುಣ್ಣಿಮೆ ಇತ್ತು. 31 ರಂದು ರಾತ್ರಿ ಪೂರ್ಣಚಂದಿರ ಆಗಸದಲ್ಲಿ ಕಂಗೊಳಿಸಲಿದ್ದಾನೆ.

Image result for blue moon phenomenon

ಸೂಪರ್ ಮೂನ್ – ಚಂದಿರ ಭೂಮಿಗೆ ಅತ್ಯಂತ ಹತ್ತಿರ ಬಂದಾಗ ಅದನ್ನು ‘ ಸೂಪರ್ ಮೂನ್ ‘ ಎಂದು ಕರೆಯಲಾಗುತ್ತದೆ. ಚಂದ್ರ ಈ ಸಮಯದಲ್ಲಿ 14 ಪ್ರತಿಶತ ಹೆಚ್ಚು ದೊಡ್ಡದಾಗಿಯೂ 30 ಪಟ್ಟು ಹೆಚ್ಚು ಪ್ರಕಾಶಮಾನವಾಗಿಯೂ ಕಾಣಿಸಲಿದ್ದಾನೆ.

Related image

ಬ್ಲಡ್ ಮೂನ್ – ಸೂರ್ಯ ಹಾಗೂ ಚಂದ್ರನ ನಡುವೆ ಭೂಮಿ ಬಂದು, ಚಂದ್ರನ ಮೇಲೆ ಭೂಮಿಯ ನೆರಳು ಬಿದ್ದಾಗ ‘ ಚಂದ್ರ ಗ್ರಹಣ ‘ (Lunar Eclipse) ಉಂಟಾಗುತ್ತದೆ. ಈ ಚಂದ್ರಗ್ರಹಣ ಹಾಗೂ ಹುಣ್ಣಿಮೆ ಒಟ್ಟಿಗೆ ಸಂಭವಿಸಿದರೆ ಅದನ್ನು ‘ಬ್ಲಡ್ ಮೂನ್’ ಎನ್ನಲಾಗುತ್ತದೆ.

Image result for super blood blue moon

ಈ ಮೂರೂ ಒಟ್ಟಿಗೇ ಸಂಭವಿಸುತ್ತಿರುವುದರಿಂದ ಇದನ್ನು ‘ ಸೂಪರ್ ಬ್ಲಡ್ ಬ್ಲ್ಯೂ ಮೂನ್ ‘ ಎನ್ನಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com