WATCH : ಪದ್ಮಾವತ್ ‘ ಘೂಮರ್ ‘ ಹಾಡಿಗೆ ಹೆಜ್ಜೆ ಹಾಕಿದ NBA ಚಿಯರ್ ಲೀಡರ್ಸ್..!

ಕರ್ಣಿಸೇನಾ ಮುಂತಾದ ಸಂಘಟನೆಗಳ ಹಾಗೂ ರಜಪೂತ್ ಸಮುದಾಯದವರ ಪ್ರತಿಭಟನೆ, ತೀವ್ರ ವಿರೋಧಗಳ ನಡುವೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ ಬಿಡುಗಡೆಗೊಂಡಿದೆ. ರಜಪೂತ್ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗುವಂತೆ ತೋರಿಸಲಾಗಿದೆ ಎಂದು ‘ಪದ್ಮಾವತ್’ ಚಿತ್ರದ ವಿವಾದ ಹಲವಾರು ಕಡೆ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿತ್ತು.

ರಣವೀರ್ ಸಿಂಗ್, ಶಾಹಿದ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತ್’ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ. ಅಮೇರಿಕದಲ್ಲಿ ಬಾಸ್ಕೆಟ್ ಬಾಲ್ ಅತ್ಯಂತ ಜನಪ್ರಿಯ ಆಟಗಳಲ್ಲಿ ಒಂದಾಗಿದ್ದು, NBA (National Basketball Academy) ಟೂರ್ನಿಯ ಪಂದ್ಯಗಳ ಬಗ್ಗೆ ಅಮೇರಿಕದ ಜನ ತುಂಬಾನೇ ಕ್ರೇಜ್ ಹೊಂದಿದ್ದಾರೆ. ಇದೀಗ NBA ಪಂದ್ಯವೊಂದರ ವೇಳೆ ಪದ್ಮಾವತ್ ಚಿತ್ರದ ಜನಪ್ರಿಯ ‘ಘೂಮರ್’ ಹಾಡಿಗೆ ಚಿಯರ್ ಲೀಡರ್ಸ್ ಹೆಜ್ಜೆ ಹಾಕಿದ್ದಾರೆ. ಇಲ್ಲಿದೆ ವಿಡಿಯೋ..

 

Leave a Reply

Your email address will not be published.