ಪ್ರತಾಪ್‌ ಸಿಂಹಗೆ “ಹನುಮ” ಸಂಕಷ್ಟ : ಸಂಸದರ ವಿರುದ್ದ ಪ್ರಕರಣ ದಾಖಲಿಸಲು DC ಸೂಚನೆ

ಮೈಸೂರು : ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಿಬಂಧನೆಗಳನ್ನು ಉಲ್ಲಂಘನೆ ಮಾಡಿದ ಆರೋಪದಲ್ಲಿ ಸಂಸದ ಪ್ರತಾಪ್‌ ಸಿಂಹ ವಿರುದ್ದ ದೂರು ದಾಖಲಿಸಲು ನಿರ್ಧರಿಸಲಾಗಿದೆ.

ಈ ಕುರಿತು ಮೈಸೂರು ಜಿಲ್ಲಾಧಿಕಾರಿ ರಂದೀಪ್‌ ಹೇಳಿಕೆ ನೀಡಿದ್ದು, ಮೆರವಣಿಗೆ ವೇಳೆ ಪ್ರತಾಪ್‌ ಸಿಂಹ ವಿಶೇಷ ವಾಹನ ಬಳಸಿದ್ದರು. ಮೆರವಣಿಗೆಗೆ ಅನುಮತಿ ನೀಡುವ ವೇಳೆ ವಿಶೇಷ ವಾಹನ ಬಳಸುವಂತಿಲ್ಲ ಎಂದು ಷರತ್ತು ವಿಧಿಸಲಾಗಿತ್ತು. ಆದರೆ ನಿರ್ಬಂಧ ಉಲ್ಲಂಘಿಸಿ ವಿಶೇಷ ವಾಹನ ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ ಕೇಸ್‌ ದಾಖಲಿಸಲು ಸೂಚಿಸಿರುವುದಾಗಿ ರಂದೀಪ್‌ ಹೇಳಿದ್ದಾರೆ.

ಹನುಮಜಯಂತಿ ದಿನಾಚರಣೆಯಲ್ಲಿ ಯಾವುದೇ ತೊಂದರೆಯಾಗದಂತೆ ಹಾಗೂ ನಿಯಮಗಳನ್ನು ಉಲ್ಲಂಘಿಸದಂತೆ ಸೂಚನೆ ನೀಡಲಾಗಿತ್ತು. ಅಲ್ಲದೆ ಸಮಸ್ಯೆ ಇರುವ ಕಾರಣ ಜಿಲ್ಲಾಡಳಿತ ಇದರಲ್ಲಿ ಮಧ್ಯಪ್ರವೇಶ ಮಾಡಿತ್ತು.

Leave a Reply

Your email address will not be published.

Social Media Auto Publish Powered By : XYZScripts.com