“ಅಯ್ಯಯ್ಯೋ ಭಯೋತ್ಪಾದಕ ಭಟ್ಟ” : ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ದ ನಿಂದನಾತ್ಮಕ ಪೋಸ್ಟ್‌

ಮಂಗಳೂರು : ಕೋಮುಗಲಭೆಯಿಂದ ದಳ್ಳುರಿಯಿಂದ ಸ್ವಲ್ಪ ಶಾಂತ ಸ್ಥಿತಿಗೆ ಬಂದಿರುವ ಮಂಗಳೂರಿನಲ್ಲಿ ಮತ್ತೆ ಕಿಡಿಗೇಡಿಗಳು ಕಿಡಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ದ ಸೋಶಿಯಲ್‌ ಮೀಡಿಯಾಗಳಲ್ಲಿ ನಿಂದನಾತ್ಮಕ ಪೋಸ್ಟ್‌ ಹಾಕಲಾಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಟ್ರು ಮೀಡಿಯಾ ನೆಟ್‌ವರ್ಕ್‌ ಫೇಸ್‌ಬುಕ್‌ ಪೇಜ್‌ನಲ್ಲಿ ಅವಳನಕಾರಿ ಪೋಸ್ಟ್‌ ಹಾಕಲಾಗಿದೆ.ಕಲ್ಲಡ್ಕದಲ್ಲಿ ಮುದುಕ ಭಯೋತ್ಪಾದಕ ಹಿಜಡಾ ಭಟ್ಟನಿಂದ ಪ್ಯಾಂಟ್‌ ಹಾಕಿ ಟ್ರೈನಿಂಗ್‌, ಮಂಗನಿಂದ ಮಾನವ ಎಂಬುದನ್ನು ಸಾಬೀತುಪಡಿಸಿದ ಭಟ್ಟ. ಅಯ್ಯಯ್ಯೋ ಭಯೋತ್ಪಾದಕ ಭಟ್ ಎಂದು ಕಲ್ಲಡ್ಕ ಪ್ರಭಾಕರ್ ಅವರ ಫೋಟೋ ಹಾಕಿ ವ್ಯಂಗ್ಯ ಮಾಡಲಾಗಿದೆ.

ಭಟ್‌ ಅವರ ಯೋಗಾಸನದ ಭಂಗಿಯ ಜೊತೆ ನಾಯಿಯ ಫೋಟೋ ಹಾಕಲಾಗಿದ್ದು, ಅಸಭ್ಯ ಬರವಣಿಗೆಗಳನ್ನು ಹಾಕಲಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರು, ಆರ್‌ಎಸ್‌ಎಸ್‌ನ ನೂತನ ಸಮವಸ್ತ್ರದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನು ಟ್ರು ಮೀಡಿಯಾ ಫೇಸ್‌ಬುಕ್‌ ಪೇಜ್‌ನಲ್ಲಿ ಅವಹೇಳನ ಮಾಡಲಾಗಿದೆ.

Leave a Reply

Your email address will not be published.