ಅನ್ಸಾರಿ ತಮ್ಮ ಗಂಡಸ್ತನವನ್ನು ಸರ್ಕಲ್‌ನಲ್ಲಿ ತೋರಿಸಲಿ : ತಿರುಗೇಟು ನೀಡಿದ ಪರಣ್ಣ ಮುನವಳ್ಳಿ

ಕೊಪ್ಪಳ : ಶಾಸಕ ಇಕ್ಬಾಲ್‌ ಅನ್ಸಾರಿ ಅವರ ಹೇಳಿಕೆಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ತಿರುಗೇಟು ನೀಡಿದ್ದಾರೆ. ಟಾರ್ಗೆಟ್‌ ಮಾಡಿ ಮಾತನಾಡಿದ್ರೆ ನಾವು ಸುಮ್ಮನೆ ಕೂರುವವರಲ್ಲ. ಇಂತಹವರಿಗೆ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸುವುದಾಗಿ ಹೇಳಿದ್ದಾರೆ.

ಈ ದೇಶದಲ್ಲಿ, ರಾಜ್ಯದಲ್ಲಿರೋರು ಹಿಂದುಗಳು. ಒಂದು ಕೋಮಿನ ಬಗ್ಗೆ ಶಾಸಕರು ಮಾತನಾಡಬಾರದು. ಚುನಾವಣೆಯಲ್ಲಿ ಸೋಲುತ್ತೇನೆಂದು ಭಯದಲ್ಲಿ ಅನ್ಸಾರಿ ಹೀಗೆ ಹೇಳಿಕೆ ನೀಡ್ತಿದ್ದಾರೆ. ಅನ್ಸಾರಿ ಎಷ್ಟೊತ್ತಿಗೆ ಎದ್ದೇಳುತ್ತಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಲೇವಡಿ ಮಾಡಿದ್ದಾರೆ.  ಈಗ ಅನ್ಸಾರಿಗೆ ಎಚ್ಚರವಾಗಿದೆ. ಅವರ ಗಂಡಸತನ ಬೇಕಾದ್ರೆ ಸರ್ಕಲ್‌ನಲ್ಲಿ ತೋರಿಸಲಿ. ಅನ್ಸಾರಿ ಗೆ ಬುದ್ದಿ ಭ್ರಮಣೆಯಾಗಿದೆ. ಹಾಗಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಅವರು ಎರಡನೆ ಮದುವೆಯಾಗಿರೋದು ವೈಯಕ್ತಿಕ ವಿಚಾರ. ಜನರಲ್ಲಿ ಅಶಾಂತಿ ಉಂಟು ಮಾಡಲು ಹೇಳಿಕೆ ಕೊಡುತ್ತಿದ್ದಾರೆ. ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರಬೇಕು. ಜವಾಬ್ದಾರಿಯನ್ನು ಅರಿತು ಮಾತನಾಡಬೇಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com