ಅಧಿಕಾರಕ್ಕೆ ಬರಲು BJP ಯವರು ಕೋಮುಗಲಭೆ ಮಾಡಿಸುತ್ತಿದ್ದಾರೆ : ಇಕ್ಬಾಲ್ ಅನ್ಸಾರಿ

ಕೊಪ್ಪಳ : ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿಕೆ‌ ನೀಡಿದ್ದಾರೆ. ‘ ಸುಳ್ಳು ಹೇಳೋದು, ಮೋಸ ಮಾಡೋದು, ಜನರ ದಾರಿ ತಪ್ಪಿಸೋದನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಾಠ ಹೇಳಿಕೊಟ್ಟಿದ್ದಾರೆ. ಅಮಿತ್ ಶಾ ನಮ್ಮ ರಾಜ್ಯ ಕ್ಕೆ ಕಾಲಿಟ್ಟು ಹೋದ್ಮೇಲೆ ಬಿಜೆಪಿ ಯವರು ದಂಗೆದ್ದು ಹಲ್ಲೆ ಮಾಡ್ತಿದ್ದಾರೆ. ಸುಮ್ಮನೆ ಗಲಾಟೆ ಮಾಡೋದು ಆರಂಭ ಮಾಡಿದ್ದಾರೆ ‘ ಎಂದಿದ್ದಾರೆ.

‘ ಬಿಜೆಪಿ ಕಾರ್ಯಕರ್ತರು ಎಂದ್ರೆ ಗುಂಡಾ ಕಾರ್ಯಕರ್ತರು. ಅವರಿಂದ ಎಲ್ಲಬೇಕಾದ್ರಲ್ಲಿ ಗುಂಡಾಯಿಸಂ ಜಾಸ್ತಿಯಾಗಿದೆ. ಬಿಜೆಪಿ ಯವರು ಹಿಂದುತ್ವ ಕಾರ್ಡ್ ಹಿಡಿದು ನಿ ಹಿಂಗ ಮಾಡ್ಬೇಕಂತ ಒತ್ತಡ ಹಾಕ್ತಾರೆ. ಇಲ್ಲಂದ್ರೆ ಜನರನ್ನ ಹೆದರಿಸ್ತಾರೆ ಬಿಜೆಪಿ ಯವರು. ಪರಣ್ಣ ಮುನವಳ್ಳಿ ಗುಂಡಾ ಕಾರ್ಯಕರ್ತರು ಪೊಲೀಸರಿಗೆ ಹೆದರಿಸ್ತಾರೆ ‘

ಕಾನೂನು ಚೌಕಟ್ಟಿನಲ್ಲಿ ಕೆಲ್ಸ ಮಾಡಲು ಬಿಡುವದಿಲ್ಲ. ನಾವು ಹೇಳಿದಂಗ ಕೇಳದಿದ್ರೆ ಠಾಣೆಯೆದರು ಪ್ರತಿಭಟನೆ ಮಾಡ್ತೀವಿ ಅಂತ ಪೊಲೀಸರಿಗೆ ಹೆದರಿಸ್ತಾರೆ. ಪರಣ್ಣ ಮುನವಳ್ಳಿ ಇವರು ಕೇವಲ ಪೊಲೀಸ್ ಠಾಣೆಗೆ ಓಡಾಡುವ ಕೆಲ್ಸ ಮಾಡ್ತಾರೆ. ನಮ್ಮ ಕಾರ್ಯಕರ್ತರು ಗುಂಡಾಗಿರಿ ಮಾಡಿದ್ರು, ದಾಂಧಲೆ ಮಾಡಿದರು ಬಿಡ್ಬೇಕಂತ ಪೊಲೀಸರಿಗೆ ಹೆದರಿಸ್ತಾರೆ.

ಧ್ವಜ ಕಟ್ಟುವ ವಿಷಯದಲ್ಲಿ ಬಿಜೆಪಿ ಗೂಂಡಾ ಕಾರ್ಯಕರ್ತರು ದಾಂಧಲೆ ಮಾಡಿದ್ರು. ಧ್ವಜ ಕಟ್ಟುವ ವಿಚಾರ ದಲ್ಲಿ ಬಿಜೆಪಿ,ಆರ್ ಎಸ್ ಎಸ್ ಕೋಮುಗಲಭೆ ಸೃಷ್ಠಿಸಿದರು. ಗಂಗಾವತಿ ಯಲ್ಲಿ ಈ ಹಿಂದೆ ಕೋಮುಗಲಭೆ ಸೃಷ್ಟಿ ಮಾಡಿದರು. ಹನುಮ ಜಯಂತಿ ವೇಳೆ ಹನುಮಮಾಲಾಧಾರಿ ರೂಪದಲ್ಲಿ ಗುಂಡಾಗಳು ಬಂದು ದಾಂಧಲೆ ಮಾಡಿದರು.

ಮಚ್ಚು,ಲಾಂಗು, ಡೊಣ್ಣೆ,ಚಾಕುದೊಂದಿಗೆ ಬಿಜೆಪಿ ಯವರು ಗುಂಡಾಗಳನ್ನ ಕರೆತಂದರು. ಬಿಜೆಪಿಯವರು ಅಧಿಕಾರ ಕ್ಕೆ ಬರಬೇಕೆಂದು ದಾಹಕ್ಕಾಗಿ ಕೋಮುಗಲಭೆ ಮಾಡಿಸ್ತಿದ್ದಾರೆ. ಖುರ್ಚಿ ಮೇಲೆ ಕುಳಿತು ಕೊಳ್ಳಲು ಕೋಮುಗಲಭೆ ಎಬ್ಬಿಸಿ ಕೊಲೆ ಮಾಡಿಸ್ತಿದ್ದಾರೆ. ಬಿಜೆಪಿಯವರು ಸಂವಿಧಾನ ಆಶಯಗಳಿಗೆ ನಡೆದುಕೊಳ್ಳುವವರಲ್ಲ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com