ಶ್ರೀಮಂತ ಸಂಸದರೆಲ್ಲ ಸಂಬಳ ತ್ಯಾಗ ಮಾಡಿ : BJP ಸಂಸದ ವರುಣ್‌ ಗಾಂಧಿ

ದೆಹಲಿ : ಆರ್ಥಿಕ ಅಸಮಾನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶ್ರೀಮಂತ ಸಂಸದರು ತಮ್ಮ ವೇತನವನ್ನು ತ್ಯಜಿಸಬೇಕು ಎಂದು ಬಿಜೆಪಿ ಸಂಸದ ವರುಣ್‌ ಗಾಂಧಿ ಹೇಳಿದ್ದಾರೆ.

ಸಂಸದರು ಶೇ.100ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಆದರೆ 16ನೇ ಲೋಕಸಭೆಯ ಇನ್ನುಳಿದ ಅವಧಿಗೆ ಶ್ರೀಂತ ಸಂಸದರು ತಮ್ಮವೇತನವ್ನು ಬಿಟ್ಟುಕೊಡುವ ಅಭಿಯಾನ ಆರಂಭಿಸಬೇಕು ಎಂದು ಸ್ಪೀಕರ್‌ ಬಳಿ ಮನವಿ ಮಾಡುವುದಾಗಿ ಸುಮಿತ್ರಾ ಮಹಜನ್‌ ಅವರಿಗೆ ಪತ್ರ ಬರೆದಿದ್ದಾರೆ.

ಭಾರತದಲ್ಲಿ ದಿನದಿಂದ ದಿನಕ್ಕೆ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಶೇ. 1ರಷ್ಟು ಮಂದಿ ಶೇ.70ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಆದ್ದರಿಂದ ಸಂಸದರು ತಮ್ಮ ವೇತನವನ್ನು ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com