Cricket : ಸಾರ್ವಕಾಲಿಕ ICC ಟೆಸ್ಟ್ ರ‍್ಯಾಂಕಿಂಗ್‌ : ಲಾರಾ ಹಿಂದಿಕ್ಕಿದ ಕೊಹ್ಲಿ

ಭಾನುವಾರ ಬಿಡುಗಡೆಯಾದ ಸಾರ್ವಕಾಲಿಕ ಟೆಸ್ಟ್ ಬ್ಯಾಟ್ಸಮನ್ ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ.

ಜೋಹಾನೆಸ್ ಬರ್ಗ್ ಟೆಸ್ಟ್ ಪಂದ್ಯದ ನಂತರ 912 ಪಾಯಿಂಟ್ ಗಳಿಸಿದ ವಿರಾಟ್ ಕೊಹ್ಲಿ, 911 ಪಾಯಿಂಟ್ ಹೊಂದಿರುವ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೇ ಕೆವಿನ್ ಪೀಟರ್ಸನ್ (909), ಹಾಶಿಮ್ ಆಮ್ಲ (907), ಶಿವನಾರಾಯಣ್ ಚಂದ್ರಪಾಲ್ (901) ಹಾಗೂ ಮೈಕಲ್ ಕ್ಲಾರ್ಕ್ (900) ಅವರನ್ನೂ ಸಹ ಕೊಹ್ಲಿ ಹಿಂದಿಕ್ಕಿದ್ದಾರೆ.

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮ್ನನ್ 961 ಪಾಯಿಂಟ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಸಾರ್ವಕಾಲಿಕ ಟೆಸ್ಟ್ ಬ್ಯಾಟ್ಸಮನ್ ರ್ಯಾಂಕಿಂಗ್ ಪಟ್ಟಿ, ಒಬ್ಬ ಬ್ಯಾಟ್ಸಮನ್ ತನ್ನ ವೃತ್ತಿಜೀವನದಲ್ಲಿ ಗಳಿಸಿದ ಅತಿ ಹೆಚ್ಚು ಪಾಯಿಂಟ್ ಗಳ ದಾಖಲೆಯನ್ನು ಆಧಾರಿಸಿರುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com