BIGG BOSS : ಭಾವುಕರಾದ ಕಿಚ್ಚ ಸುದೀಪ್‌ ವೇದಿಕೆಯಲ್ಲೇ ಕಣ್ಣೀರಿಟ್ಟಿದ್ಯಾಕೆ…?

ಕನ್ನಡದ ಐದನೇ ಸೀಸನ್‌ನ ಬಿಗ್‌ಬಾಸ್‌ ಕಾರ್ಯಕ್ರಮ ಮುಕ್ತಾಯಗೊಂಡಿದ್ದು, ನಿರೀಕ್ಷೆಯಂತೆ ಚಂದನ್‌ ಶೆಟ್ಟಿ ವಿನ್ನರ್‌ ಪಟ್ಟ ಅಲಂಕರಿಸಿದ್ದಾರೆ. ಕನ್ನಡ ಕಿರುತೆರೆಯಲ್ಲೇ ಅತೀ ದೊಡ್ಡ ಹಾಗೂ ಹಿಟ್‌ ಕಾರ್ಯಕ್ರಮ ಬಿಗ್‌ಬಾಸ್‌ ಎಂದು ಹೇಳಲಾಗುತ್ತದೆಯ 3 ತಿಂಗಳು ಹೊರ ಜಗತ್ತಿನ ಪರಿಚಯವೇ ಇಲ್ಲದೆ ಮನೆಯಲ್ಲಿರುವ ಸದಸ್ಯರೊಂದಿಗೆ ಸ್ಪರ್ಧಿಗಳು ಕಾಲಕಳೆಯಬೇಕು. ಇದೇ ಅವರ ದೊಡ್ಡ ಟಾಸ್ಕ್‌.

ಈ ಬಿಗ್‌ಬಾಸ್‌ ಕಾರ್ಯಕ್ರಮದ ನಿರೂಪಣೆಯ ಹೊರೆ ಕಿಚ್ಚ ಸುದೀಪ್‌ ಅವರ ಹೆಗಲ ಮೇಲಿದೆ. ಅವರು ಕಾರ್ಯಕ್ರಮ ನಡೆಸಿಕೊಡುವ ರೀತಿಯೇ ಅದ್ಭುತ. ಅದೇ ರೀತಿ ಆ ಬಾರಿ ಐದು ಸೀಸನ್‌ನಲ್ಲಿ ಸುದೀಪ್ ಅವರ ನಿರೂಪಣೆ ಯಾವ ರೀತಿ ಇತ್ತು ಎಂದು ವಾಹಿನಿಯವರು ಚಿಕ್ಕದೊಂದು ವಿ.ಟಿ ಮಾಡಿದ್ದರು. ಅದರಲ್ಲಿ ಬಿಗ್‌ಬಾಸ್‌ ಸ್ಟೇಜ್‌ ಮೇಲೆ ಬಂದ ಅತಿಥಿಗಳು, ಸೇರಿದಂತೆ ಎಲ್ಲಾ ಪಂಚಾಯ್ತಿಗಳನ್ನೂ ತೋರಿಸಲಾಗಿತ್ತು.

ಈ ವೇಳೆ ಇತ್ತೀಚಿಗಷ್ಟೇ ಸಿಸಿಎಲ್‌ನಲ್ಲಿ ಕಿಚ್ಚನ ಟೀಮ್‌ನಲ್ಲಿದ್ದ ಧೃುವ ಅವರ ವಿಡಿಯೋ ತೋರಿಸಲಾಗಿತ್ತು. ಕರ್ನಾಟಕ ಬುಲ್ಡೋಜರ್‌ ತಂಡದ ಧೃುವ ಅವರು ಸೀಸನ್‌ 1ರಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮದೇ ಶೈಲಿಯಲ್ಲಿ ಕಾರ್ಯಕ್ರಮದ ಬಗ್ಗೆ ಹೇಳಿದ್ದರು. ಆ ಕ್ಷಣವನ್ನೂ ವಿಡಿಯೋದಲ್ಲಿ ತೋರಿಸಲಾಗಿತ್ತು.

ಆ ವಿಡಿಯೋದಲ್ಲಿ ಧೃುವ ಅವರನ್ನು ನೋಡಿದ ಕಿಚ್ಚ ಭಾವುಕರಾದರು. ಅಲ್ಲದೆ ಧೃವ ಅವರ ಸ್ನೇಹಿತ ಜೆಕೆ ಸಹ ಕಣ್ಣೀರಿಟ್ಟರು. ಅನೇಕ ವರ್ಷಗಳಿಂದ ಸಿಸಿಎಲ್‌ನಲ್ಲಿ ಆಡುತ್ತಿದ್ದ ಧೃುವ  ಅವರಿಗೆ ಕಿವಿ ಕೇಳಿಸುತ್ತಿರಲಿಲ್ಲ. ಮಾತೂ ಬರುತ್ತಿರಲಿಲ್ಲ. ಆದರೆ ತಮ್ಮ ಪ್ರತಿಭೆಯ ಮೂಲಕ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ, ಸಿನಿಮಾದಲ್ಲೂ ನಾಯಕನಾಗಿ ಅಭಿನಯಿಸಿದ್ದು, ಬಹು ಅಂಗಾಂಗ ವೈಫಲ್ಯದಿಂದ ಸಾವಿಗೀಡಾಗಿದ್ದರು.

ಇದನ್ನು ನೆನಪಿಸಿಕೊಂಡ ಕಿಚ್ಚ ಸುದೀಪ್‌ ಭಾವುಕರಾಗಿ ಅಗಲಿದ ಗೆಳೆಯನನ್ನು ನೆನೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com