ನಮಗೆ ಮೋದಿಯಂತಹ ಅನುತ್ಪಾದಕ ವ್ಯಕ್ತಿಯನ್ನು ವಿರೋಧಿಸುವಷ್ಟು ಟೈಮಿಲ್ಲ : ಕನ್ಹಯ್ಯ ಕುಮಾರ್‌

ಬೆಂಗಳೂರು : ನಮ್ಮನ್ನು ಎಲ್ಲರೂ ಮೋದಿ ವಿರೋಧಿಗಳು ಎನ್ನುತ್ತಾರೆ. ಆದರೆ ನಮಗೆ ನಿಮ್ಮಂತಹ ಅನುತ್ಪಾದಕ ವ್ಯಕ್ತಿಯನ್ನು ವಿರೋಧಿಸುವಷ್ಟು ಸಮಯವಿಲ್ಲ. ನಾವು ನಿಮ್ಮನ್ನು ವಿರೋಧಿಸುತ್ತಿರುವುದು ನೀವು ಮೋದಿ ಎಂಬ ಕಾರಣಕ್ಕಲ್ಲ. ನೀವು ದೇಶದ ಪ್ರಧಾನಿ ಎಂಬ ಕಾರಣಕ್ಕೆ ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಗೌರಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿ ಯಾರೂ ಸಂಘ ಪರಿವಾರದವರಿಲ್ಲ. ಇಲ್ಲಿರುವವರಲ್ಲ ಗೌರಿ ಪರಿವಾರದವರು. ಈ ದೇಶದಲ್ಲಿ ಅಮ್ಮ ಎಂಬ ಕಾರ್ಡನ್ನು ಮಾತರ ಮೋದಿ ಬಳಕೆ ಮಾಡುತ್ತಾರೆ. ಅಮ್ಮನನ್ನು ಎಟಿಎಂ ಮುಂದೆ ನಿಲ್ಲಿಸುತ್ತಾರೆ. ಅವರ ಪ್ರಕಾರ ನಮಗೆ ಅಮ್ಮ ಮಕ್ಕಳ ಸಂಬಂಧ ಇಲ್ಲ. ಗೌರಿ ಪರಿವಾರ, ಸಂಘಪರಿವಾರಕ್ಕೆ ಹೊಡೆತ ಕೊಟ್ಟೆ ಕೊಡುತ್ತದೆ. ಎಲ್ಲಾ ಮುಸ್ಲೀಮರನ್ನು ಕೊಂದು ಹಾಕಿದರೆ ನಿಮ್ಮ ಸಮಸ್ಯೆ ಮುಗಿಯುತ್ತದಾ ಎಂದು ಕನ್ಹಯ್ಯ ಕುಮಾರ್‌ ಪ್ರಶ್ನಿಸಿದ್ದಾರೆ.

ಹಿಂದೂ ಧರ್ಮದ ಪ್ರಕಾರ ಒಂದು ಊರಿನಲ್ಲಿ ಹೆಣ ಬಿದ್ದರೆ ಇಡೀ ಊರಿನ ಜನ ಊಟ ಮಾಡುವುದಿಲ್ಲ. ಆದರೆ ನೀವು ಹೆಣದ ಮೇಲೆ ಟ್ವೀಟ್‌ ಮಾಡುತ್ತೀರಿ. ನಮಗೆ ಮೋದಿ ರಾಜಕೀಯ ಬೇಕಲ್ಲ. ನಮ್ಮ ಗೌರಿ ಪರಿವಾರದಿಂದ ಸಂಘ ಪರಿವಾರ ತುಂಡಾಗುತ್ತದೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com