BJPಯನ್ನು ಬದಿಗೊತ್ತಿ 2018ರ ಚುನಾವಣಾ ಅಖಾಡಕ್ಕಿಳಿದ ಹಿಂದೂ ಮಹಾಸಭಾ…!

ಬೆಂಗಳೂರು : 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರಬರುತ್ತಿದ್ದಂತೆ ಚುನಾವಣೆಯ ಕಾವು ಹೆಚ್ಚುತ್ತಿದೆ. ಇನ್ನು ಚುನಾವಣಾ ಕಣಕ್ಕಿಳಿಯಲು ಅನೇ ಸಂಘಟನೆಗಳು ಪ್ರಯತ್ನಿಸುತ್ತಿದ್ದು, ಆ ಸಾಲಿಗೆ ಹಿಂದೂ ಮಹಾ ಸಭಾ ಸಹ ಸೇರ್ಪಡೆಯಾಗಿದೆ.
ಹೌದು 150 ಕ್ಷೇತ್ರಗಳಲ್ಲೂ ಹಿಂದೂ ಮಹಾಸಭಾ ಚುನಾವಣೆಗೆ ಸ್ಪರ್ಧಿಸಲಿದ್ದು, ಫೆಬ್ರವರಿ ತಿಂಗಳಲ್ಲಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ರಾಜ್ಯಾಧ್ಯಕ್ಷ ಎನ್‌ ಸುಬ್ರಮಣ್ಯಂರಾಜು ಹೇಳಿದ್ದಾರೆ.
 ಬಿಜೆಪಿ ಹಿಂದುತ್ವದ ಬಗೆಗಿನ ಬದ್ದತೆಯನ್ನು ಕಳೆದುಕೊಂಡಿದೆ. ಆದ್ದರಿಂದ ಹಿಂದುಗಳ ರಕ್ಷಣೆಗಾಗಿ ಹಿಂದೂ ಮಹಾಸಭಾ ಕಣಕ್ಕಿಳಿಯಲಿದ್ದು, ಎಲ್ಲೆಡೆ ಸ್ಪರ್ಧೆ ನಡೆಸುವುದಾಗಿ ಹೇಳಿದ್ದಾರೆ. ಇದೇ ವೇಳೆ ಸಿಎಂ ವಿರುದ್ಧ ಕಿಡಿಕಾರಿರುವ ಅವರು, ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಮನವೊಲಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕೋಮುಸಂಘಟನೆಗಳ ವಿರುದ್ಧದ ಕೇಸ್‌ ವಾಪಸ್‌ ತೆಗೆಯುವುದರಿಂದ ಕಾಂಗ್ರೆಸ್‌ ಗೆಲ್ಲುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.