ಅಧಿಕಾರಕ್ಕಾಗಿ BJP ಓವೈಸಿಯನ್ನು ಒಲಿಸಿಕೊಂಡಿದೆ : ರಾಮಲಿಂಗಾರೆಡ್ಡಿ

ಬೆಂಗಳೂರು : ಹೈದ್ರಾಬಾದ್ ನಲ್ಲಿ ಬಿಜೆಪಿ ನಾಯಕರು ಓವೈಸಿ ಜೊತೆ ಗುಪ್ತ ಸಭೆ ನಡೆಸಿದ್ದು, ಚುನಾವಣೆಯ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ನಮಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಅಧಿಕಾರಕ್ಕಾಗಿ ಬಿಜೆಪಿಯವರು ಯಾವ ಮಾರ್ಗ ಬೇಕಾದರೂ ಹಿಡಿಯುತ್ತಾರೆ ಎಂದಿರುವ ಅವರು, ಇದು ಬಿಜೆಪಿಗೆ ಹೊಸದೇನಲ್ಲ. ಉತ್ತರ ಪ್ರದೇಶದಲ್ಲಿಯೂ ಹೀಗೆ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಕರ್ನಾಟಕದಲ್ಲೂ ಅದೇ ತಂತ್ರವನ್ನ ಅನುಸರಿಸ್ತಿದ್ದಾರೆ. ಪಿಎಫ್ ಐ, ಎಸ್ ಡಿಪಿಐ ಜೊತೆ ಹೊದಾಣಿಕೆ ಮಾಡಿಕೊಂಡಿರುವುದು ಬಿಜೆಪಿಯೇ. ಆ ಸಂಘಟನೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ದಾಖಲೆಯನ್ನೂ ತೋರಿಸುತ್ತೇವೆ. ನಾವು ಈ ಸಂಘಟನೆಗಳ ಜೊತೆ ಗುರುತಿಸಿಕೊಂಡಿಲ್ಲ. ಸಮಾಜವನ್ನು ಒಡೆಯುವ ಕಾಯಕ ಮಾಡಿಕೊಂಡಿರುವವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡ್ರೆ ಸಮಾಜದ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

 

Leave a Reply

Your email address will not be published.