Cricket : ದ.ಆಫ್ರಿಕಾ T20 ಸರಣಿಗೆ ಟೀಮ್ ಇಂಡಿಯಾ : ತಂಡಕ್ಕೆ ಮರಳಿದ ರೈನಾ

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ-20 ಸರಣಿಗಾಗಿ 16 ಸದಸ್ಯರನ್ನೊಳಗೊಂಡ ಭಾರತ ತಂಡವನ್ನು ಭಾನುವಾರ ಪ್ರಕಟಿಸಲಾಗಿದೆ. ಉತ್ತರ ಪ್ರದೇಶದ ಎಡಗೈ ಬ್ಯಾಟ್ಸಮನ್ ಸುರೇಶ್ ರೈನಾ ಅವರು ತಂಡಕ್ಕೆ ಮರಳಿದ್ದಾರೆ.

ಮೊದಲ ಟಿ-20 ಪಂದ್ಯ ಫೆಬ್ರುವರಿ 18 ರಂದು ಜೋಹಾನೆಸ್ಬರ್ಗ್ ನಲ್ಲಿ ನಡೆಯಲಿದೆ. 2ನೇ ಪಂದ್ಯ 21 ರಂದು ಸೆಂಚುರಿಯನ್ ನಲ್ಲಿ ಹಾಗೂ 3ನೇ ಪಂದ್ಯ 24 ರಂದು ಕೇಪ್ ಟೌನ್ ನಲ್ಲಿ ನಡೆಯಲಿವೆ.

ತಂಡ ಇಂತಿದೆ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ ಎಲ್ ರಾಹುಲ್, ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ, ಅಕ್ಸರ್ ಪಟೇಲ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಜಯದೇವ್ ಉನಾದ್ಕಟ್, ಶಾರ್ದೂಲ್ ಠಾಕೂರ್.

Leave a Reply

Your email address will not be published.

Social Media Auto Publish Powered By : XYZScripts.com