‘ ಒಬ್ಬ ಮಗಳು ಹತ್ತು ಗಂಡು ಮಕ್ಕಳಿಗೆ ಸಮ ‘ : Mann Ki Baat ನಲ್ಲಿ ಮೋದಿ

2018 ರ ವರ್ಷದ ತಮ್ಮ ಮೊದಲ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮಹಿಳಾ ಸಬಲೀಕರಣ, ಜನ ಔಷಧಿ ಯೋಜನೆ ಹಾಗೂ ಪದ್ಮ ಪ್ರಶಸ್ತಿಗಳ ಬಗ್ಗೆ ಮಾತನಾಡಿದ್ದಾರೆ.

‘ ನಾವು ಇವತ್ತು ಬೇಟಿ ಬಚಾವೋ ಬೇಟಿ ಪಢಾವೊ ಬಗ್ಗೆ ಮಾತನಾಡುತ್ತೇವೆ, ಆದರೆ ಹಲವು ಯುಗಗಳ ಹಿಂದೆಯೇ ನಮ್ಮ ಪವಿತ್ರ ಗ್ರಂಥಗಳಲ್ಲಿ ಒಬ್ಬ ಮಗಳು ಹತ್ತು ಗಂಡು ಮಕ್ಕಳಿಗೆ ಸಮ ಎಂದು ಹೇಳಲಾಗಿದೆ ‘ ಎಂದಿದ್ದಾರೆ.

ಭಾರತದ ಪ್ರಥಮ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ‘ ಕಲ್ಪನಾ ಚಾವ್ಲಾ ಭಾರತದ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ‘ ಎಂದು ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com