ಬೀದರ್ : ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ ಯುವಕನ ಕೊಲೆ..!

ಬೀದರ್ : ಭಾಲ್ಕಿ ನಂತರ ಬಸವಕಲ್ಯಾಣದಲ್ಲು ಮತ್ತೊಂದು ಕೊಲೆಯಾಗಿದೆ. ಅನ್ಯ ಜಾತಿ ಹುಡುಗಿಯನ್ನು ಪ್ರೀತಿಸುತಿದ್ದ ಬಸವಕಲ್ಯಾಣ ತಾಲೂಕಿನ ಇಲ್ಲಾಳ ಗ್ರಾಮದ ಹಣಮಂತ (ಸಚಿನ್) ತಂದೆ ಬಾಬು ಹಿರೊಳ್ಳೆ ಯುವಕ ಕೊಲೆಯಾಗಿದ್ದಾನೆ. ಇದೇ ಗ್ರಾಮದ ಅನ್ಯಜಾತಿಯ ಹುಡುಗಿಯೊಬ್ಬಳನ್ನು ಪ್ರೀತಿಸುವಂತೆ ಪೀಡಿಸುತಿದ್ದ ಎನ್ನಲಾಗಿದೆ.

ಕಳೆದ 19 ರಂದು ಬಾಲಕ ಮನೆಯಿಂದ ಕಾಣೆಯಾಗಿದ್ದ. ಈ ಕುರಿತು ಆತನ ತಾಯಿ ನೀಡಿದ ದೂರಿನ ಮೇಲೆ ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಇಲ್ಲಾಳ ಹಾಗೂ ಮಂಠಾಳ ಗ್ರಾಮದ ಮದ್ಯದ ಜಮಿನೊಂದರ ಬಾವಿಯಲ್ಲಿ ಶವ ಪತ್ತೆಯಾಗಿದೆ. ಕೊಲೆ ನಂತರ ಶವ ಚಿಲದಲ್ಲಿ ಕಟ್ಟಿ ಬಾವಿಗೆ ಬಿಸಾಡಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಹುಮನಾಬಾದ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆ ಮಾಡಿದ್ದಾರೆ ಎನ್ನುವ ಅನುಮಾನದ ಮೇಲೆ ಕೆಲ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com