ದೇವೇಗೌಡರ ಆಳ್ವಿಕೆಯಲ್ಲಿ HDK ಮುಖ್ಯಮಂತ್ರಿ ಆಗ್ತಾರೆ : ಪ್ರಜ್ವಲ್ ರೇವಣ್ಣ

‘ ಇನ್ಮುಂದೆ ದೇವೇಗೌಡರ ಆಳ್ವಿಕೆಯಲ್ಲಿ‌ ಹೆಚ್.ಡಿ‌.ಕುಮಾರಸ್ವಾಮಿ‌ ಮುಖ್ಯಮಂತ್ರಿ ‘ ಎಂದು ಹೇಳಿಕೆ‌ ನೀಡಿ ಹೊಸದೊಂದು ಚರ್ಚೆಗೆ ಜೆಡಿಎಸ್ ನ ಯುವ ಸಾರಥಿ ಪ್ರಜ್ವಲ್ ರೇವಣ್ಣ ಕಾರಣರಾಗಿದ್ದಾರೆ. ತುಮಕೂರು ಜಿಲ್ಲೆ ತಿಪಟೂರಿನ ನೊಣವಿಕೆರೆಯಲ್ಲಿ ನಡೆದ ಜೆಡಿಎಸ್ ಸಮಾವೇಷವನ್ನ‌ ಉದ್ದೇಶಿಸಿ ಮಾತನಾಡಿದ ಪ್ರಜ್ವಲ್ ರೇವಣ್ಣ,ಮುಂದೆ ದೇವೆಗೌಡರ ಆಳ್ವಿಕೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೇಳಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.

‘ ಹಳ್ಳಿಯಿಂದ ಹೋದವರೇ ದಿಲ್ಲಿ ಆಳೋರು, ಸಾಧನೆ ಮಾಡೋದು ಎಂದು ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಮೊಮ್ಮಗ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ.‌ ಈ ಬಾರಿ ರೈತರು, ಯುವಕರು ಜೆಡಿಎಸ್ ಕೈ ಹಿಡಿಯಬೇಕು, ಹಾಗಾದರೆ ಮಾತ್ರ ದೇವೇಗೌಡರ ಆಳ್ವಿಕೆಯಲ್ಲಿ, ಕುಮಾರಣ್ಣ ಮುಖ್ಯಮಂತ್ರಿ ಆಗ್ತಾರೆ. ಹಳ್ಳಿಯಿಂದ ಹೋಗಿ ದಿಲ್ಲಿ ಗದ್ದುಗೆ ಹಿಡಿಯುತ್ತಾರೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com