IPL Auction 2018 : ಗೇಲ್ ಖರೀದಿಸಿದ ಪಂಜಾಬ್ : ಉನಾದ್ಕಟ್‍ಗೆ 11.5 ಕೋಟಿ ನೀಡಿದ RR

ಇಂಡಿಯನ್ ಪ್ರಿಮಿಯರ್ ಲೀಗ್ 11ನೇ ಆವೃತ್ತಿಯ ಆಟಗಾರರ ಎರಡನೇ ದಿನದ ಹರಾಜು ಪ್ರಕ್ರಿಯೆ ಭಾನುವಾರ ಬೆಂಗಳೂರಿನಲ್ಲಿ ಮುಕ್ತಾಯಗೊಂಡಿದೆ. ಮೊದಲ ದಿನ ಮಾರಾಟವಾಗದೇ ಉಳಿದಿದ್ದ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸಮನ್ ಕ್ರಿಸ್ ಗೇಲ್ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಮೂಲಬೆಲೆ 2 ಕೋಟಿ ನೀಡಿ ಖರೀದಿಸಿದೆ.

ಗುಜರಾತಿನ ಎಡಗೈ ವೇಗದ ಬೌಲರ್ ಜೈದೇವ್ ಉನಾದ್ಕಟ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 11.5 ಕೋಟಿ ನೀಡಿ ಖರೀದಿಸಿದೆ. ಕರ್ನಾಟಕದ ಕೆ. ಗೌತಮ್ ಅವರನ್ನು ರಾಜಸ್ಥಾನ ರಾಯಲ್ಸ್ 6.2 ಕೋಟಿ ನೀಡಿ ಖರೀದಿಸಿದೆ. ಮುರುಗನ್ ಅಶ್ವಿನ್ ಅವರನ್ನು ರಾಯಲ್ ಚಾಲೆಂಜರ್ಸ್ ತಂಡ 2.2 ಕೋಟಿ ನೀಡಿ ಖರೀದಿಸಿದೆ. ನ್ಯೂಜಿಲೆಂಡಿನ ಮಾರ್ಟಿನ್ ಗಪ್ಟಿಲ್ ಮಾರಟವಾಗದೇ ಉಳಿದರು.

Leave a Reply

Your email address will not be published.

Social Media Auto Publish Powered By : XYZScripts.com