‘ ಕಾಂಗ್ರೆಸ್, ಬಿಜೆಪಿಯಿಂದ ನನ್ನ ಜನರಿಗೆ ಬರೀ ನೋವು ‘ : H.D ದೇವಗೌಡ

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗ್ರಾಮ ಪಿ.ನೇರಲೆಕೆರೆಯಲ್ಲಿ  ಕಸಬಾ ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ಹೆಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ. ‘ ನನಗೆ ಅನುಭವ ಇದೆ. ಈಶ್ವರ ಅನುಗ್ರಹ ಇಲ್ದಿದ್ರೆ ಏನೂ ಮಾಡೋಕೆ ಆಗೋಲ್ಲ. ಈಶ್ವರನ ಅನುಗ್ರಹದಿಂದಲೇ ನಾನು ಪಿಎಂ ಆಗಿದ್ದು.
ಅಧಿಕಾರಕ್ಕಾಗಿ ಇಂದು ಹೋರಾಡ್ತೀವಿ. ಅಂದು ಅಧಿಕಾರವನ್ನೇ ಬಿಟ್ಟು ಬಂದೆ, ನೀರಾವರಿ ಯೋಜನೆಗಾಗಿ ರಾಜೀನಾಮೆ ನೀಡಿದೆ ‘ ಎಂದರು.

‘ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನ್ನ ಜೀವನ ಚರಿತ್ರೆ ಬಂದಮೇಲೆ ಮುಂದಿನ ಪೀಳಿಗೆಗೆ ಅರಿವಾಗಲಿದೆ. ಇಂತಹ ಒಬ್ಬ ಮನುಷ್ಯ ಹುಟ್ಟಿದ್ನ ಅಂತ.
ಕಾಂಗ್ರೆಸ್ ಬಿಜೆಪಿಯಿಂದ ನನ್ನ ಜನಕ್ಕೆ ಬರೀ ನೋವು. ಇನ್ನೆರಡು ವಾರದಲ್ಲಿ ಕಾವೇರಿ ಅಂತಿಮ ತೀರ್ಪು. ತೀರ್ಪು ಏನಾಗುತ್ತೋ ಅನ್ನೋ ಆತಂಕವಿದೆ.
ಆ ನೋವಿಂದ ರಾತ್ರಿ ಕೂಡ ನಿದ್ದೆ ಬರ್ತಿಲ್ಲ. ದುಡ್ಡಿನಿಂದ ಗೆಲ್ಲೋಕೆ ಆಗೋದಿಲ್ಲ. ಯುವಕರು ಎದ್ದು ನಿಲ್ಲಬೇಕು ‘ ಎಂದರು.

‘ ಕುಮಾರಣ್ಣನ ಸಿಎಂ ಮಾಡಲು ಹೋರಾಡ್ಬೇಕು. ನನ್ನಲ್ಲಿ ಜಾತಿ ಇಲ್ಲ. ಅದಿದ್ದಿದ್ರೆ ಸಿದ್ದರಾಮಯ್ಯ, ವೀರೇಂದ್ರ ಪಾಟೀಲ್ರನ್ನ ತಲೆ ಮೇಲೆ ಹೊತ್ತು ಮೆರೆಸ್ತಿರಲಿಲ್ಲ.
ನನ್ನ ಶಕ್ತಿ ನೀವೇ. ಒಂದೆಡೆ ಮೋದಿ, ಮತ್ತೊಂದೆಡೆ ಸಿದ್ದರಾಮಯ್ಯ. ಇವರಿಬ್ಬರ ನಡುವೆ ನಾವು ಹೋರಾಡಬೇಕಿದೆ. ಅದಕ್ಕಾಗಿ ನಿಮ್ಮ ಶಕ್ತಿ ಬೇಕು. ನೀವೆಲ್ಲರೂ ಸೇರಿ ಪ್ರಾದೇಶಿಕ ಪಕ್ಷ ಉಳಿಸಿ. ಕುಮಾರಸ್ವಾಮಿಯನ್ನ ಬಲ ಪಡಿಸಿ ‘ ಎಂದಿದ್ದಾರೆ.

Leave a Reply

Your email address will not be published.