Cricket : 3ನೇ ಟೆಸ್ಟ್ ಗೆಲುವಿನ ಹಿಂದಿನ Secret ಹೇಳಿದ ಕ್ಯಾಪ್ಟನ್ Kohli..!

ಜೋಹಾನೆಸ್ ಬರ್ಗ್ ನಲ್ಲಿ ಶನಿವಾರ ಮುಕ್ತಾಯಗೊಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 63 ರನ್ ಜಯಗಳಿಸಿತ್ತು. ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಕೈಚೆಲ್ಲಿ ಸರಣಿಯನ್ನು ಸೋತಿದ್ದ ಭಾರತ ಕೊನೆಯ ಮ್ಯಾಚ್ ಗೆದ್ದು ಮರ್ಯಾದೆ ಉಳಿಸಿಕೊಂಡಿತು.

Image result for 3rd test sa ind johannesburg

ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ನಾಯಕ ವಿರಾಟ್ ಕೊಹ್ಲಿ ‘ ನಮ್ಮ ಮೇಲೆ ನಾವಿಟ್ಟ ನಂಬಿಕೆಯೇ ಗೆಲುವಿಗೆ ಕಾರಣವಾಗಿದೆ ‘ ಎಂದು ಹೇಳಿದ್ದಾರೆ. ‘ ನಾವು ಬೇರೆಯವರಂತೆ ಹೊರಗಿನ ಸಂಗತಿಗಳ ಬಗ್ಗೆ ಯೋಚಿಸುವುದಿಲ್ಲ, ನಾವಂದುಕೊಂಡಂತೆ ಎಲ್ಲವೂ ನಡೆಯದೇ ಇದ್ದಾಗ, ನಾವು ಹಾಗೆ ಮಾಡಬೇಕಿತ್ತು ಅಥವಾ ಹೀಗೆ ಮಾಡಬಾರದಿತ್ತು ಎಂದೆಲ್ಲ ಯೋಚಿಸುವುದಿಲ್ಲ ‘ ಎಂದಿದ್ದಾರೆ.

Image result for 3rd test sa ind johannesburg

‘ ಒಂದು ತಂಡವಾಗಿ ನಮ್ಮನ್ನು ನಾವೇ ಬೆಂಬಲಿಸಿಕೊಂಡಿದ್ದೆವು. ಬೇರೆಯವರಿಗೆ ನಮ್ಮ ಸಾಮರ್ಥ್ಯದೆ ಮೇಲೆ ನಂಬಿಕೆಯಿರಲಿಲ್ಲ. ಆದರೆ ನಾವು ನಂಬಿಕೆ ಕಳೆದುಕೊಂಡಿರಲಿಲ್ಲ. ಮೊದಲೆರಡು ಟೆಸ್ಟ್ ಗಳಲ್ಲಿ ಗೆಲುವಿಗೆ ತುಂಬ ಹತ್ತಿರ ಬಂದಿದ್ದೆವು. ಒತ್ತಡದ ಸಂದರ್ಭದಲ್ಲಿ ಚೆನ್ನಾಗಿ ಆಡಿದರೆ ಜಯ ಸಾಧಿಸಬಹುದೆಂದು ಅನಿಸಿತ್ತು. ಅದನ್ನು ಈ ಪಂದ್ಯದಲ್ಲಿ ಸಾಧಿಸಿ ತೋರಿಸಿದ್ದೇವೆ. ಮೂರನೇ ಟೆಸ್ಟ್ ಗೆಲ್ಲಲೇಬೇಕೆಂದು ನಾವು ಮೊದಲೇ ಧೃಡವಾಗಿ ನಿಶ್ಚಯಿಸಿದ್ದೆವು ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com