ಪ್ರಧಾನಿ ನರೇಂದ್ರ ಮೋದಿ ಪಕೋಡಾ ಸ್ಟಾಲ್‌ : ಇದು ತಮಾಷೆಯಲ್ಲ, ನಮ್ಮ ನೋವು…

ಪ್ರಧಾನಿ ಮೋದಿ ಪಕೋಡಾ ವೃತ್ತಿಯ ಘನತೆಯ ಕುರಿತು ಮಾತನಾಡಿರುವುದಲ್ಲ, ಅವರು ಪಕೋಡಾ ಮಾರುವವರ ಬದುಕನ್ನೂ ಆಡಿಕೊಂಡಿದ್ದಾರೆ. ಚುನಾವಣೆಗೂ ಮುನ್ನ ಉದ್ಯೋಗ ಕಲ್ಪಿಸುವುದಾಗಿ ಹೇಳಿದ್ದರು. ಆದರೆ ಇಂದು ಪಕೋಡಾ ಮಾರಿ ದಿನಕ್ಕೆ 200 ರೂ ಸಂಪಾದಿಸುವುದು ಉದ್ಯೋಗ ಹೌದೋ ಅಲ್ಲವೋ ಎಂದು ಅಬ್ಬರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲ ಬಿಜೆಪಿ ಕಚೇರಿ ಮುಂದೆ ವೋಟ್‌ ಫಾರ್‌ ಜಾಬ್‌ ಕಾರ್ಯಕರ್ತರು ಪಕೋಡಾ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಅಲ್ಲದೆ ಪ್ರಧಾನಿ ಮೋದಿ ಅವರ ಜೊತೆ 1 ಗಂಟೆ ಸಂವಾದಕ್ಕೆ ಅವಕಾಶ ಮಾಡಿ ನಮ್ಮ ಪ್ರಣಾಳಿಕೆ  ಕರಡು ಕೊಡಲು ಫೆಬ್ರವರಿ 4ಕ್ಕೆ ಅವಕಾಶ ನೀಡಬೇಕು. ಇಲ್ಲವಾದರೆ ಪಕೋಡಾ ಸ್ಟಾಲ್‌ ಮುಂದುವರಿಸುವುದಾಗಿ ಹೇಳಿದ್ದಾರೆ.

ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಇರುವ ಉದ್ಯೋಗವನ್ನೂ ಕಡಿಮೆ ಮಾಡಿದ್ದಾರೆ. ನಮ್ಮನ್ನು ಇವರೇನು ಕುರಿಗಳೆಂದುಕೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಪಕೋಡಾ ಮಾರುವವರ ಬದುಕನ್ನು ಆಡಿಕೊಳ್ಳುವುದನ್ನು, ಕೃಷಿಕರ ಅಸಹಾಯಕತೆಯನ್ನು ಆಡಿಕೊಳ್ಳುವವರನು ಕ್ಷಮಿಸಲು ಸಾಧ್ಯವಿಲ್ಲ ಎಂದಿರುವ ಯುವಕರು, ಫೆಬ್ರವರಿ 4ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರ ಜೊತೆ ಈ ವಿಚಾರವಾಗಿ ಮಾತುಕತೆ ನಡೆಸುತ್ತೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬಿಜೆಪಿ ಕಚೇರಿ ಎದುರು ಪಕೋಟಾ ಸ್ಟಾಲ್‌ ಮುಂದುವರಿಸುವುದಾಗಿ ಹೇಳಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com