Shocking : ಶಾಸಕರಿಗೇ ಧಮ್ಕಿ ಹಾಕಿ ಹಣ ಕೀಳಲೆತ್ನಿಸಿದ ವಿದ್ಯಾರ್ಥಿನಿ….!

ಭೋಪಾಲ್‌ : ಮಧ್ಯಪ್ರದೇಶದಲ್ಲಿ  ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಶಾಸಕರಿಗೆ ಹಣ ನೀಡಿ ಇಲ್ಲವಾದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹೇಳಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾಳೆ.

ವಿದ್ಯಾರ್ಥಿನಿಯೊಬ್ಬಳು ತಾನು ಪತ್ರಕರ್ತೆ ಎಂದು ಹೇಳಿಕೊಂಡು ಬಿಂಡ್‌ ಜಿಲ್ಲೆಯ ಅತೇರ್‌ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಹೇಮಂತ್ ಕಟಾರೆಯವರನ್ನು ಅನೇಕ ಬಾರಿ ಸಂಪರ್ಕಿಸಿದ್ದು, ಬಳಿತ ತನ್ನ ಸ್ನೇಹಿತ ವಿಕ್ರಂಜಿತ್‌ ಎಂಬಾತನ ಮೂಲಕ 2ಕೋಟಿಗೆ ಬೇಡಿಕೆ ಇಟ್ಟಿದ್ದಳು. ಹಣ ನೀಡದಿದ್ದರೆ ರೇಪ್‌ಕೇಸ್‌ ದಾಖಲಿಸುವುದಾಗಿಯೂ ಬೆದರಿಕೆಯೊಡ್ಡಿದ್ದಳು. ಆದರೆ ಶಾಸಕರು 25ಲಕ್ಷ ನೀಡುವುದಾಗಿ ಒಪ್ಪಿಕೊಂಡಿದ್ದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.

5 ಲಕ್ಷ ಮುಂಗಡ ಹಣ ಪಡೆಯಲು ಬಂದ ವೇಳೆ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಆಕೆಯ ಸ್ನೇಹಿತ ವಿಕ್ರಂಜಿತ್‌ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಯುವತಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನದ ಶಿಕ್ಷೆ ವಿಧಿಸಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com