ವಾಹನ ಸವಾರರೇ ಗಮನಿಸಿ… ನಾಳೆ ಪೆಟ್ರೋಲ್‌, ಡೀಸೆಲ್ ಸಿಗಲ್ಲ…….

ಬೆಂಗಳೂರು : ನಗರದ ಹೊಸಕೋಟೆ ಬಳಿಯಿರುವ ದೇವನಗುಂಡಿ ತೈಲ ಘಟಕ ಹಾಗೂ ಟರ್ಮಿನಲ್‌ ಸಂಪರ್ಕ ರಸ್ತೆಯ ದುರಸ್ಥಿಗಾಗಿ ಒತ್ತಾಯಿಸಿ ಪೆಟ್ರೋಲ್‌ ಪೂರೈಕೆ ಮಾಡುವ ಟ್ಯಾಂಕರ್‌ಗಳ ಚಾಲಕರು ನಾಳೆ ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನಗರಕ್ಕೆ ಇಂಧನ ಪೂರೈಕೆ ಸ್ಥಗಿತಗೊಳ್ಳಲಿದ್ದು, ಬಹುತೇಕ ಪೆಟ್ರೋಲ್‌ ಬಂಕ್‌ಗಳು ಖಾಲಿಯಾಗಲಿವೆ.

ಎರಡು ವರ್ಷಗಳ ಹಿಂದೆಯಬ ಈ ರಸ್ತೆಯನ್ನು ದುರಸ್ಥಿ ಮಾಡುವಂತೆ ಲಾರಿ ಚಾಲಕರು ಪ್ರತಿಭಟನೆ ನಡೆಸಿದ್ದರುಯ ಆದರೆ ತೈಲ ಪೂರೈಕೆ ಕಂಪನಿಗಳು ಚಾಲಕರ ಮನವೊಲಿಸಿದ್ದ, ಈ ಕಾರಣದಿಂದ ಪ್ರತಿಭಟನೆ ಕೈಬಿಡಲಾಗಿತ್ತು. ಎರಡು ದಿನಗಳ ಹಿಂದೆ ಪೆಟ್ರೇಲ್‌ ಟ್ಯಾಂಕರ್‌ ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ರಸ್ತೆ ಸರಿಮಾಡುವಂತ ಪ್ರತಿಭಟನೆ ನಡೆಸಲಿದ್ದಾರೆ.

ರಸ್ತೆ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಆರಂಭವಾಗುವವರೆಗೂ ಪ್ರತಿಭಟನೆ ನಡೆಸುವುದಾಗಿ ಚಾಲಕರು ಹೇಳಿದ್ದು, ಇದರಿಂದ ಬೆಂಗಳೂರು ಸೇರಿದಂತೆ ರಾಮನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಿಗೆ ತೈಲ ಪೂರೈಕೆ ಸ್ಥಗಿತವಾಗಲಿದೆ.

Leave a Reply

Your email address will not be published.