WATCH : ಕ್ರಿಕೆಟ್‌ ಅಂಗಳದಲ್ಲಿ ಮತ್ತೊಂದು ಸಾವು : ಬೌಲಿಂಗ್‌ ಮಾಡುವಾಗ ಮೃತಪಟ್ಟ ಯುವಕ

ಹೈದರಾಬಾದ್‌ : ಕ್ರಿಕೆಟ್ ಮೈದಾನದಲ್ಲಿ ಮತ್ತೊಂದು ದುರಂತ ದಾಖಲಾಗಿದೆ. ಮೈದಾನದಲ್ಲೇ ಬೌಲರ್‌ ಒಬ್ಬ ಇದ್ದಕ್ಕಿದ್ದಂತೆ ಸಾವಿಗೀಡಾಗಿರುವ ಘಟನೆ ಹೈದರಾಬಾದ್‌ನಲಲಿ ನಡೆದಿದೆ.
ಮೃತ ಕ್ರೀಡಾ ಪಟುವನ್ನು ಅಂಥೋನಿ (23) ಎಂದು ಹೆಸರಿಸಲಾಗಿದೆ. ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಜಹೀರಾ ನಗರದಲ್ಲಿ ಕ್ರಿಕೆಟ್‌ ಟೂರ್ನಿ ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಅಂಥೋನಿ ಬೌಲಿಂಗ್‌ ಮಾಡುತ್ತಿದ್ದು, ಈ ವೇಳೆ ಏಕಾಏಕಾ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದು ಅಸುನೀಗಿದ್ದಾನೆ.
ಕೂಡಲೆ ಆಟಗಾರರು ಅಂಥೋನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂಥೋನಿ ಮೃತಪಟ್ಟಿರುವುದಾಗಿ  ಹೇಳಲಾಗಿದೆ. ಅಂಥೋನಿ ಹೋಟೆಲ್‌ ವೊಂದರಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com