IPL Auction 2018 : ಕೆ.ಎಲ್ ರಾಹುಲ್, ಮನಿಶ್ ಪಾಂಡೆಗೆ 11 ಕೋಟಿ..

2018 ನಲ್ಲಿ ನಡೆಯಲಿರುವ 11ನೇ ಸೀಸನ್ ಐಪಿಎಲ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಫ್ರಾಂಚೈಸಿಗಳು ತಮ್ಮ ಬಳಿ ಉಳಿದಿರುವ ಬಾಕಿ ಮೊತ್ತವನ್ನು ಬಳಸಿ ಆಟಗಾರರನ್ನು ಖರೀದಿಸುತ್ತಿವೆ.

ಕರ್ನಾಟಕದ ಕೆ.ಎಲ್ ರಾಹುಲ್ ಅವರನ್ನು ಕಿಂಗ್ಸ್ ಎಲೆವನ್ ಪಂಜಾಬ್ ಫ್ರಾಂಚೈಸಿ 11 ಕೋಟಿ ನೀಡಿ ಖರೀದಿಸಿದೆ. ಕಳೆದ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಪರವಾಗಿ ಆಡಿದ್ದ ರಾಹುಲ್ ಈ ಬಾರಿ ಪಂಜಾಬ್ ಪರವಾಗಿ ಆಡಲಿದ್ದಾರೆ. ಕೆ.ಎಲ್ ರಾಹುಲ್ ಮೂಲಬೆಲೆ 2 ಕೋಟಿ ಇತ್ತು.

ಕರ್ನಾಟಕ ಮತ್ತೋರ್ವ ಆಟಗಾರ ಮನಿಶ್ ಪಾಂಡೆ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 11 ಕೋಟಿ ನೀಡಿ ಖರೀದಿಸಿದೆ. ಕಳೆದ ಬಾರಿ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಆಡಿದ್ದ ಮನಿಶ್, ಸನ್ ರೈಸರ್ಸ್ ಹೈದರಾಬಾದ್ ಪರವಾಗಿ ಆಡಲಿದ್ದಾರೆ. ಮನಿಶ್ ಪಾಂಡೆ ಮೂಲ ಬೆಲೆ 1 ಕೋಟಿ ಇತ್ತು.

ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 50 ಲಕ್ಷ ನೀಡಿ ಖರೀದಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com