IQ Test ನಲ್ಲಿ ಐನ್‌ಸ್ಟೀನ್‌ರನ್ನೂ ಹಿಂದಿಕ್ಕಿದ ಭಾರತ ಮೂಲದ ಬಾಲಕ

ದೆಹಲಿ : ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ 10 ವರ್ಷದ ಬಾಲಕ ಮೆನಸ್‌ ಐಕ್ಯೂ ಪರೀಕ್ಷೆಯಲ್ಲಿ ಐನ್‌ಸ್ಟೀನ್‌ ಹಾೂ ಸ್ಟೀಫನ್‌ ಹಾಕಿಂಗ್‌ ಅವರನ್ನೇ ಮೀರಿಸಿದ್ದು, ಐಕ್ಯೂ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಈತನ ಅಣ್ಣ ಧ್ರುವ ಗರ್ಗ್‌ ಕಳೆದ ವರ್ಷ ನಡೆದ ಐಕ್ಯೂ ಟೆಸ್ಟ್‌ನಲ್ಲಿ 162 ಅಂಕ ಗಳಿಸಿದ್ದ. ಈಗ ತಮ್ಮ ತನ್ನ 10ನೇ ವಯಸ್ಸಿಗೆ ಖ್ಯಾತ ನಾಮರನ್ನೇ ಹಿಂದಿಕ್ಕಿ ದಾಖಲೆ ಬರೆದಿದ್ದಾನೆ.

ಐನ್‌ಸ್ಟೀನ್ ಹಾಗೂ ಸ್ಟೀಫನ್‌ ಹಾಕಿಂಗ್‌ ಅವರಿಗಿಂತಲೂ 2 ಅಂಕ ಹೆಚ್ಚು ಗಳಿಸಿದ್ದಾನೆ. ಪರೀಕ್ಷೆಗೆ ಹೋಗುವಾಗ ಬಹಳ ಗಾಬರಿಯಾಗಿದ್ದ. ಆದರೆ ಒಂದರೆಡು ಲೆಕ್ಕವನ್ನು ಬಿಡಿಸುತ್ತಿದ್ದಂತೆ ಆತ್ಮ ವಿಶ್ವಾಸ ಹೆಚ್ಚಾಗಿ ಪರೀಕ್ಷೆಯನ್ನು ಚೆನ್ನಾಗಿ ಮಾಡಿದ್ದಾಗಿ ಹೇಳಿದ್ದಾನೆ.

ಈತನಿಗೆ ಕ್ರಿಕೆಟ್‌ ಹಾಗೂ ಸ್ಕೇಟಿಂಗ್‌ ಎಂದರೆ ಇಷ್ಟವಂತೆ. ಅಲ್ಲದೆ ಈತ ಉತ್ತಮವಾಗಿ ಡ್ರಮ್ಸ್‌ ಸಹ ಬಾರಿಸುತ್ತಿದ್ದು. ಗಣಿತವೇ ಈತನ ಫೇವರೇಟ್‌ ವಿಷಯವಂತೆ. ಮುಂದಿನ ದಿನಗಳಲ್ಲಿ ಗೂಗಲ್‌ನಂತಹ ಕಂಪನಿಯನ್ನು ನೆಡೆಸುವ ಆಸೆ ಹೊಂದಿದ್ದಾನೆ.

 

Leave a Reply

Your email address will not be published.

Social Media Auto Publish Powered By : XYZScripts.com