BJP ಕಚೇರಿ ಎದುರು ಪಕೋಡ ತಯಾರಿಸಿ ಮೋದಿ ವಿರುದ್ದ ಪ್ರತಿಭಟಿಸಿದ ನಿರುದ್ಯೋಗಿ ಯುವಕರು

ಬೆಂಗಳೂರು : ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನಿರೋದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು. ಆದರೆ ಇತ್ತೀಚೆಗಷ್ಟೇ ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶನದ ವೇಳೆ ನಿರುದ್ಯೋಗ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಧಾನಿ ಮೋದಿ ಬೇಜವಾಬ್ದಾರಿತನದಿಂದ ಉತ್ತರ ನೀಡಿದ್ದು, ನಿಮ್ಮ ವಾಹಿನಿಯ ಎದುರಿಗೆ ವ್ಯಕ್ತಿಯೊಬ್ಬ ಪಕೋಡ ಮಾರಿ ಸಂಜೆ ವೇಳೆ ಆತ 200 ರೂಪಾಯಿ ಗಳಿಸುತ್ತಾನೆ ಎಂದರೆ ಅದು ಉದ್ಯೋಗ ಅಲ್ಲವೇ, ಅದು ಸಂಪಾದನೆಯಲ್ಲವೇ ಎಂದು ಪ್ರಶ್ನಿಸಿದ್ದರು.

ಪ್ರಧಾನಿ ಮೋದಿ ಅವರ ಈ ಹೇಳಿಕೆಗೆ ಬೆಂಗಳೂರಿನ ಯುವಕರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ವೋಟ್‌ ಫಾರ್‌ ಜಾಬ್‌  ಅಭಿಯಾನ ಆರಂಭಿಸಿದ್ದ ಯುವಕರು ಇಂದು ಬೆಂಗಳೂರಿನ ಬಿಜೆಪಿ ಕಚೇರಿ ಎದುರು ಪಕೋಡಾ ಕರಿದು ಮಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಪಕೋಡಾ ಸ್ಟಾಲ್‌ಗೆ “ನರೇಂದ್ರ ಮೋದಿ ಸ್ವಯಂ ಉದ್ಯೋಗ ಪಕೋಡಾ ಸ್ಟಾಲ್‌” ಎಂದು ಹೆಸರಿಡಲಾಗಿದ್ದು. ಸಂಪಾದನೆ ಕನಿಷ್ಟ ವೇತನಕ್ಕಿಂತ ಕಡಿಮೆ ಎಂದು ಬೋರ್ಡ್‌ ಹಾಕಲಾಗಿದೆ.

ಅಲ್ಲದೆ ಪಕೋಡಾ ಮಾರುವ ವ್ಯಕ್ತಿಯ ಬಗ್ಗೆ ನಮಗೆ ಗೌರವವಿದೆ. ಆದರೆ ಆ ಉದ್ಯೋಗ ಸೃಷ್ಠಿಸಿದ್ದು ನೀವಲ್ಲ. ಎಲ್ಲರೂ ಪಕೋಡಾ ಮಾರಲು ಸಾಧ್ಯವಿಲ್ಲ ಎಂದು ಮೋದಿ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com