Bangalore : ಜನವರಿ 29 ರಂದು ಗೌರಿ ದಿನ ಆಚರಣೆ : ನೀವೂ ಬನ್ನಿ…..

ಬೆಂಗಳೂರು : ಪತ್ರಕರ್ತೆ, ಚಿಂತಕಿ ಗೌರ ಲಂಕೇಶ್‌ ಹತ್ಯೆ ನಡೆದು ನಾಲ್ಕು ತಿಂಗಳು ಕಳೆದಿದೆ. ಇವರ ಸಾವಿಗೆ ಕೇವಲ ದೇಶ ಮಾತ್ರವಲ್ಲ ವಿದೇಶದಿಂದಲೂ ಸಾತ್ವಿಕ ಆಕ್ರೋಶ ಹರಿದುಬಂದಿದೆ. ಎಲ್ಲೆಡೆಯೂ ಜನರು ಗೌರಿ ಸಾವಿಗೆ ಕಣ್ಣೀರು ಮಿಡಿದಿದ್ದಾರೆ. ತಮಗೆ ತೋಚಿದ ರೀತಿಯಲ್ಲಿ ಗೌರಿ ಸಾವಿಗೆ ಹೋರಾಟ ನಡೆಸಿದ್ದಾರೆ. ಗೌರಿ ತತ್ವಗಳನ್ನು ಮುನ್ನಡೆಸಲು ಅನೇಕರು ದೃಢ ಸಂಕಲ್ಪ ಮಾಡಿದ್ದಾರೆ.
ಜನವರಿ 29ರಂದು ಗೌರಿ ಲಂಕೇಶ್‌ ಅವರ ಹುಟ್ಟಿದ ದಿನವಾಗಿದ್ದು, ಆ ದಿನವನ್ನು ಗೌರಿಯ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಸಮಾವೇಶದಲ್ಲಿ ಗೌರಿ ತನ್ನ ಹೆಮ್ಮೆಯ ಮಕ್ಕಳೆಂದು ಹೇಳುತ್ತಿದ್ದ ಜಿಗ್ನೇಶ್‌ ಮೇವಾನಿ, ಕನ್ಹಯ್ಯ ಕುಮಾರ್‌, ಶೆಹಲಾ ರಷೀದ್‌, ಉಮರ್‌ ಖಾಲಿದ್‌, ರೀಚಾ ಸಿಂಗ್‌ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ರೋಹಿತ್‌ ವೆಮುಲ ಅವರ ತಾಯಿ ರಾಧಿಕಾ ವೆಮುಲ, ಕವಿತಾ ಲಂಕೇಶ್‌, ನಟ ಪ್ರಕಾಶ್ ರೈ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಲಿದ್ದಾರೆ.
ಗೌರಿಯ ಆಶಯಗಳನ್ನ ಮುಂದುವರಿಸಿಕೊಂಡು ಹೋಗುವ ಸಲುವಾಗಿ ಗೌರಿಯನ್ನು ಮೆಲುಕು ಹಾಕುವ ಕಾರ್ಯಕ್ರಮಕ್ಕೆ ನೀವೂ ತಪ್ಪದೇ ಹಾಜರಾಗಿ.

Leave a Reply

Your email address will not be published.

Social Media Auto Publish Powered By : XYZScripts.com