10 ವರ್ಷದ ಮಗನನ್ನು ಫುಟ್‌ಬಾಲ್‌ನಂತೆ ಒದ್ದು ವಿಕೃತಿ ಮೆರೆದಿದ್ದ ತಂದೆ ಅರೆಸ್ಟ್‌

ಬೆಂಗಳೂರು : ತನ್ನ 10 ವರ್ಷದ ಮಗ ಸುಳ್ಳು ಹೇಳುತ್ತಾನೆ ಎಂದು ಸಿಟ್ಟಿಗೆದ್ದ ತಂದೆಯೊಬ್ಬ ಮಗನಿಗೆ ಮನಬಂದಂತೆ ಥಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಹೆಸರಿಸಲಾಗಿದೆ. ಆರೋಪಿ ಮಹೇಂದ್ರ ತನ್ನ ಮಗನಿಗೆ ಮನಬಂದಂತೆ ಥಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಬಂಧಿತನನ್ನು ವಿಚಾರಣೆ ಮಾಡಿದಾಗ ನನ್ನ ಮಗ ನನ್ನ ಮಾತು ಕೇಳುತ್ತಿರಲಿಲ್ಲ. ಏನೇ ಹೇಳಿದರೂ ತಿರಸ್ಕಾರ ಮಾಡುತ್ತಿದ್ದ. ಆದ್ದರಿಂದ ಅವನ ತಾಯಿ ಮುಂದೆಯೇ ಆತನನ್ನು ಹೊಡೆಯುತ್ತಿದ್ದೆ. ಅದನ್ನು ಚಿತ್ರೀಕರಿಸಲು ನಾನೇ ನನ್ನ ಹೆಂಡತಿಗೆ ಹೇಳಿದ್ದೆ. ನನ್ನ ಮಗ ಮತ್ತೊಮ್ಮೆ ಗಲಾಟೆ ಮಾಡಿದರೆ ಆತನಿಗೆ ಹೆದರಿಸಲು ಆ ವಿಡಿಯೋ ಮಾಡಲು ಹೇಳಿದ್ದಾಗಿ ಮಹೇಂದ್ರ ಹೇಳಿದ್ದಾನೆ.

ವಿಡಿಯೋ ವೈರಲ್ಲಾಗಿದ್ದು ಹೇಗೆ ?

ಕೆಲ ದಿನಗಳ ಹಿಂದೆ ಮೊಬೈಲ್‌ ಹಾಳಾಗಿದ್ದ ಕಾರಣ ರಿಪೇರಿಗೆಂದು ಕೊಟ್ಟಿದ್ದನು. ಆ ವೇಳೆ ಮೊಬೈಲ್‌ ಫ್ಲಾಶ್ ಮಾಡುವ ವೇಳೆ ಎಲ್ಲಾ ಫೋಟೋ, ವಿಡಿಯೋಗಳನ್ನು ತನ್ನ ಕಂಪ್ಯೂಟರ್‌ನಲ್ಲಿ ಹಾಕುತ್ತಿದ್ದಾಗ ಈ ವಿಡಿಯೋ ನೋಡಿದ್ದು, ಕೂಡಲೆ ಫೇಸ್‌ಬುಕ್‌ನಲ್ಲಿ ಹಾಕಿದ್ದಾನೆ. ಬಳಿಕ ಈ ವಿಡಿಯೋ ವೈರಲ್ ಆಗಿದೆ.

 

Leave a Reply

Your email address will not be published.