ಮಹಿಳೆಯರೇ Face Book ಬಳಸೋ ಮುನ್ನ ಈ ಸುದ್ದಿಯನ್ನೊಮ್ಮೆ ಓದಿ…..

ಬೆಂಗಳೂರು : ಇತ್ತೀಚೆಗೆ ಯುವಕ ಯುವತಿಯರಲ್ಲದೆ ಮಕ್ಕಳ ಕೈಯಲ್ಲೂ ಮೊಬೈಲ್‌ ಬಂದಿದ್ದು, ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಮುಳುಗಿರುತ್ತಾರೆ. ಬಾಲಕಿಯೊಬ್ಬಳಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಬಾಲಿವುಡ್‌ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಶ್ರೀಲಂಕಾ ಮೂಲದ ಬಾಲಕಿಯನ್ನುಕಳ್ಳ ಸಾಗಣೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಸದ್ಯ ಆರೋಪಿಗಳು ಉಪ್ಪಾರಪೇಟೆ  ಪೊಲೀಸರ ಅತಿಥಿಯಾಗಿದ್ದಾರೆ.ಆರೋಪಿಗಳನ್ನು ಸತೀಶ್‌ಪಾಟೀಲ್‌, ರಮೇಶ್, ಶಂಭು ಎಂದು ಹೆಸರಿಸಲಾಗಿದೆ. ಸತೀಶ್‌ ಪಾಟೀಲ್‌ ಬಾಲಕಿಗೆ ಫೇಸ್‌ಬುಕ್‌ ಸ್ನೇಹಿತನಾಗಿದ್ದು, ಎರಡು ವರ್ಷಗಳಿಂದ ಬಾಲಕಿ ಚಾಟ್‌ ಮಾಡುತ್ತಿದ್ದಳು. ಈ ವೇಳೆ ಸತೀಶ್‌ ನನಗೆ ಬಾಲಿವುಡ್‌  ಸಿನಿಮಾ ಇಂಡಸ್ಟ್ರಿಯ ಪರಿಚಯವಿದೆ ನಿನಗೆ ಚಾನ್ಸ್ ಕೊಡಿಸುತ್ತೇನೆ ಎಂದಿದ್ದಾನೆ.

ಸತೀಶ್‌ ಮಾತನ್ನ ನಂಬಿದ ಬಾಲಕಿ ಬೆಂಗಳೂರಿಗೆ ಬಂದಿದ್ದಾಳೆ. ಬಳಿಕ ಶೂಟಿಂಗ್‌, ಫೋಟೋ ಶೂಟ್‌ ಎಂದು ಸತೀಶ್ ಹಣ ಕೇಳಿದ್ದಾನೆ. ಅಲ್ಲದೆ ಬಾಲಕಿಯನ್ನು ಬಾಂಬೆ, ಹಾವೇರಿ, ಬೆಂಗಳೂರು ಎಂದು ತಿರುಗಾಡಿಸಿದ್ದಾನೆ. ಅಲ್ಲದೆ ಬಾಲಕಿ ತನ್ನ ತಾಯಿ ಜೊತೆಗಿದ್ದ ಕಾರಣ ಆಕೆ ಸುರಕ್ಷಿತವಾಗಿದ್ದಳು.

ಬಾಲಕಿ ಹೆಚ್ಚು ಹಣ ಕೊಡದಿದ್ದಾಗ ಅವರನ್ನು ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಮಾನವ ಕಳ್ಳ ಸಾಗಣಿಕೆಯಲ್ಲಿ ಸಿಲುಕಿದ್ದ ಬಾಲಕಿಯನ್ನು ಸ್ವಯಂ ಸೇವಕ ಸಂಘಟನೆಯವರು ಎನ್‌ಜಿಒ ಒಂದರ ಮೂಲಕ ಬಾಲಕಿಯನ್ನು ರಕ್ಷಣೆ ಮಾಡಿ ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಾಲಕಿಯನ್ನು ವಾಪಸ್‌ ಶ್ರೀಲಂಕಾಗೆ ಕಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com