ಕನ್ನಡದ ಹಿರಿಯ ನಟ, ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್‌ ಇನ್ನಿಲ್ಲ

ಬೆಂಗಳೂರು : ಕನ್ನಡದ ಹಿರಿಯ ನಟ ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್‌ ವಿಧಿವಶರಾಗಿದ್ದಾರೆ. ಕೆನಡಾದಲ್ಲಿದ್ದ ಅವರಿಗೆ ಶನಿವಾರ ಮುಂಜಾನೆ ಹೃದಯಾಘಾತದಿಂದ ಅಸುನೀಗಿರುವುದಾಗಿ ತಿಳಿದುಬಂದಿದೆ.

ಇವರು 1973ರಲ್ಲಿ ಪುಟ್ಟಣ್ಣ ಕಣಗಾಲ್‌ ಅವರ ನಿರ್ದೇಶನ ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಚಂದ್ರಶೇಖರ್‌ ನಾಯಕರಾಗಿ ಕಾಣಿಸಿಕೊಂಡಿದ್ದರು. ಬಳಿಕ ಶಿವಲಿಂಗ, ಅಸ್ತಿತ್ವ, ಕಾರಂಜಿ, ಜೀವ, ಪೂರ್ವಾಪರ, ಮಳೆ ಬಂತು ಮಳೆ, ಮಾನಸ ಸರೋವರ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ಚಂದ್ರಶೇಖರ್‌ ಪತ್ನಿ ಶೀಲಾ ಹಾಗೂ ಪುತ್ರಿ ತಾನ್ಯರನ್ನು ಅಗಲಿದ್ದಾರೆ.ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಲಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.

Leave a Reply

Your email address will not be published.