ಅಡುಗೆ ಮಾಡದೆ Facebook ನಲ್ಲಿ ಬ್ಯುಸಿಯಾಗಿದ್ದ ಪತ್ನಿಗೆ ಪತಿ ಅದೆಂಥಾ ಶಿಕ್ಷೆ ಕೊಟ್ಬಿಟ್ಟ…?

ಕೋಲ್ಕತ್ತಾ : ಮಹಿಳೆಯರಿಗೆ ಟಿವಿ ಧಾರಾವಾಹಿಗಳೆಂದರೆ ಇಷ್ಟ ಎಂಬುದು ಎಲ್ಲರಿಗೂ ಗೊತ್ತು. ಆದರೆ ಈಗ ಮೊಬೈಲ್ ಬಂದಿರುವ ಕಾರಣ ಎಲ್ಲರೂ ಮೊಬೈಲ್‌ನಲ್ಲೇ ಮುಳುಗಿರುತ್ತಾರೆ. ಅದೇ ರೀತಿ ಮಹಿಳೆಯೊಬ್ಬರು ಅಡುಗೆ ಮಾಡದೆ ಸೋಶಿಯಲ್‌ ಮೀಡಿಯಾದಲ್ಲಿ ಮಗ್ನವಾಗಿದ್ದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಜನವರಿ 24ರಂದು ಗಂಡ ಕೆಲಸ ಮುಗಿಸಿ ಮನೆಗೆ ಬಂದಾಗ ತನ್ನ ಮೊಬೈಲ್‌ ಫೋನ್‌ ಹಿಡದುಕೊಂಡು ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್‌ ಆಗಿದ್ದಳು. ಅಲ್ಲದೆ ಆಕೆ ಅಡುಗೆ ಮಾಡುವುದನ್ನೂ ಮರೆತು ಫೇಸ್‌ಬುಕ್‌ನಲ್ಲಿ ಏನೋ ಮಾಡುತ್ತಾ ಕುಳಿತಿದ್ದಳು. ಇದರಿಂದ ಸಿಟ್ಟಿಗೆದ್ದ ಪತಿ ಸುರಜಿತ್‌ ಆಕೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್‌ ಆತ ಪ್ರಾಣಾಪಾಯದಿಂದ ಪಾರಾಗಿ ಪೊಲೀಸರ ಅತಿಥಿಯಾಗಿದ್ದಾನೆ.

ಸೋಶಿಯಲ್‌ ಮೀಡಿಯಾದಲ್ಲಿ ಹೆಂಡತಿ ಹೆಚ್ಚು ಸಮಯ ಕಳೆಯುತ್ತಿದ್ದಳು. ಇದರಿಂದಾಗಿ ಆಕೆಗೆ ಅಕ್ರಮ ಸಂಬಂಧ ಇದೆ ಎಂಬ ಶಂಕೆಯಿಂದ ಆಕೆಯನ್ನು ಹತ್ಯೆ ಮಾಡಿದ್ದಾಗಿ ಪರಿ ಸುರಜಿತ್‌ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

 

 

Leave a Reply

Your email address will not be published.

Social Media Auto Publish Powered By : XYZScripts.com