ಶಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವಷ್ಟು ಕೀಳು ಮಟ್ಟಕ್ಕೆ ನಾವು ಇಳಿಯಲ್ಲ : M.B ಪಾಟೀಲ್‌

ವಿಜಯಪುರ : ವಾಟಾಳ್ ನಾಗರಾಜ್ ಅವರು ಬಂದ್ ಮಾಡಲು ಸರ್ಕಾರ ಸಪೋರ್ಟ್ ಮಾಡುವ ಪ್ರಶ್ನೆಯೆ ಇಲ್ಲ. ಬಂದ್‌ಗೂ ಸರ್ಕಾರಕ್ಕೂ ಯಾವುದೇ ಸಂಭಂದವಿಲ್ಲ. ಅಮಿತ್‌ ಶಾ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವಂತಹ ಕೀಳು ಮಟ್ಟಕ್ಕೆ ನಾವು ಹೋಗುವುದಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್‌ ಹೇಳಿದ್ದಾರೆ.

ವಿಜಯಪುರದಲ್ಲಿ ನಡೆದ ಕಾರ್ಯಕ್ರಮವದಲ್ಲಿ ಮಾತನಾಡಿದ ಅವರು, ಹಸಿರು ವಿಜಯಪುರಕ್ಕಾಗಿ ಎರಡನೇ ಬಾರಿಗೆ ಗೋಲ್‌ ಗುಂಬಜ್ ಮ್ಯಾರಥಾನ್ ನಡೆಸಲಾಗುವುದು. ಕಳೆದ ವರ್ಷ ಆರಂಭವಾಗಿರುವ ವೃಕ್ಷತ್ತಾನ್ ಗೆ ಈ ಬಾರಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಭಾಗವಹಿಸಲಿರುವುದಲ್ಲದೆ, ಚಿತ್ರನಟ ಯಶ್ ರಾಧಿಕಾ ದಂಪತಿಗಳು ವೃಕ್ಷತ್ತಾನ್ ಮ್ಯಾರಥಾನ್ ನಲ್ಲಿ ಭಾಗವಹಿಸಿ ಚಾಲನೆ ನೀಡುವುದಾಗಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published.