ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಡವಟ್ಟು : ಮಕ್ಕಳ ಕೈಯಲ್ಲಿ ರಾಷ್ಟ್ರಧ್ವಜದ ಬದಲು ಭಗವಧ್ವಜ

ವಿಜಯಪುರ : ಗಣರಾಜ್ಯೋತ್ಸದ ಧ್ವಜಾರೋಹಣ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಯಡವಟ್ಟು ನಡೆದಿದೆ. ವೇದಿಕೆ ಮೇಲೆ ಕುಳಿತ ಮಕ್ಕಳು ಕೈಯಲ್ಲಿ  ರಾಷ್ಟ್ರಧ್ವಜದ ಬದಲು ಭಗವದ್ವಜ ಹಿಡಿದಿದ್ದು, ಆಯೋಜಕರ ಯಡವಟ್ಟಿನಿಂದ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಧ್ವಜಾರೋಹಣದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ರಮೇಶ್‌ ಬೂಸನೂರ ಆಗಮಿಸಿದ್ದರು. ಈ ವೇಳೆ ಮಗುವೊಂದು ಭಾರತ ಮಾತೆಯ ವೇಷ ತೊಟ್ಟಿದ್ದು, ಆ ಬಾಲಕಿ ಕೈಯಲ್ಲಿ ಆಯೋಜಕರು ಭಗವದ್ವಜ ನೀಡಿದ್ದರು. ಭಗವಧ್ವಜದಲ್ಲಿ ಕೇಸರಿ ಬಣ್ಣದಲ್ಲಿ  ಓಂ ಚಿತ್ರವಿದ್ದು, ಆಯೋಜಕರ ಯಡವಟ್ಟಿಗೆ ಪೋಷಕರು ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.