Indonesia Masters Badminton : ಸಿಂಧು ಮಣಿಸಿ ಸೆಮಿಸ್ ಪ್ರವೇಸಿಸಿದ ಸೈನಾ

ಜಕಾರ್ತಾದಲ್ಲಿ ನಡೆದ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ವಿರುದ್ಧ ಸೈನಾ ನೆಹ್ವಾಲ್ ಜಯಗಳಿಸಿದ್ದಾರೆ. ಈ ಮೂಲಕ ಸೈನಾ ನೆಹ್ವಾಲ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಹೈದರಾಬಾದ್ ಮೂಲದವರಾದ ಸೈನಾ ಹಾಗೂ ಸಿಂಧು ಇದುವರೆಗೆ ಒಟ್ಟು ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸೈನಾಗೆ ಇದು ಎರಡನೇ ಗೆಲುವಾಗಿದೆ. ಪಿ.ವಿ ಸಿಂಧು ವಿಶ್ವದ 2ನೇ ಶ್ರೇಯಾಂಕಿತ ಹಾಗೂ ಸೈನಾ ನೆಹ್ವಾಲ್ 12ನೇ ಶ್ರೇಯಾಂಕಿತ ಆಟಗಾರ್ತಿಯಾಗಿದ್ದಾರೆ.

ಶನಿವಾರ ನಡೆಯಲಿರುವ ಸೆಮಿಫೈನಲ್ ನಲ್ಲಿ ಸೈನಾ ಥಾಯ್ಲೆಂಡಿನ ರಚನಾಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com