ಧಮ್ಕಿ ಹಾಕೋಕೆ ಬರೋರು ಮಾತ್ರ ರಾಜಕಾರಣ ಮಾಡ್ಬೇಕಾ…? : ತನ್ವೀರ್‌ ಸೇಠ್‌

ರಾಯಚೂರು : ರಾಜಕಾರಣ ಮಾಡಲು, ಧಮ್ಕಿ ಹಾಕಲು ಬರಬೇಕಾ? ಎಂದು ಸಚಿವ ತನ್ವೀರ್‌ ಸೇಠ್ ಪ್ರಶ್ನಿಸಿದ್ದಾರೆ. ರಾಯಚೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಯಾರೂ ಬಳೆ ತೊಟ್ಟಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವವರು ತಮ್ಮ ಬಗ್ಗೆ ಯೋಚಿಸಲಿ.
ನಾವು ಯಾರ ಮನಸ್ಸನ್ನು ನೋಯಿಸುವುದಿಲ್ಲ. ಇದು ನಮ್ಮ ಸಂಸ್ಕೃತಿ. ನಾವು ಜನರ ನೀರೀಕ್ಷೆಯಂತೆ ಕೆಲಸ ಮಾಡಿದ್ದೇವೆ. ರಾಜ್ಯದ ವಾತಾವರಣವನ್ನು ಹಾಳು ಮಾಡಲು ಯಾರೇ ಬಂದರೂ ಜನ ಕ್ಷಮಿಸುವುದಿಲ್ಲ ಎಂದಿದ್ದಾರೆ.

ಮಹದಾಯಿ ವಿಚಾರದಲ್ಲಿ ಇಡೀ ರಾಜ್ಯ ಹೊತ್ತಿ ಉರಿಯುತ್ತಿದೆ. ಇಂತಹ ಸಮಯದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಭೆ ಮಾಡುತ್ತಾರೆ. ಮಹದಾಯಿ ವಿಚಾರವನ್ನು ಪ್ರಧಾನಿ ಗಮನಕ್ಕೆ ತರುತ್ತೇನೆ ಎಂದಿದ್ದರೆ ನಾನು ಕೈಮುಗಿದು ನಮಸ್ಕಾರ ಮಾಡುತ್ತಿದ್ದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com