ಹಾರ್ಪಿಕ್‌ ಜಾಹೀರಾತಿಗೆ ಟಾಂಗ್‌ ಕೊಟ್ಟ ಪತಂಜಲಿ : ಮಿಸ್‌ ಮಾಡದೇ ಈ ವಿಡಿಯೋ ನೋಡಿ…!

ವ್ಯಾಪಾರ ಎಂದ ಮೇಲೆ ಆಯಾ ಕಂಪನಿಗಳು ತಮ್ಮ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡುವುದು ಸಾಮಾನ್ಯ. ಅಂತೆಯೇ ಯಾವುದೇ ಕಂಪನಿ ಟಿ.ವಿ, ಪೇಪರ್‌ ಹೀಗೆ ಯಾವುದರಲ್ಲಾದರೂ ಜಾಹೀರಾತುಗಳನ್ನು ನೀಡಬಹುದು.

ಇನ್ನು ಕೆಲ ಕಂಪನಿಗಳು ಬೇರೆ ಕಂಪನಿಗಳ ಜಾಹೀರಾತನ್ನು ಅನುಸರಿಸಿ ಅವಕ್ಕೆ ವಿರುದ್ದವಾಗಿ ಜಾಹೀರಾತುಗಳನ್ನು ನೀಡುತ್ತವೆ. ಬಳಿಕ ಆ ಜಾಹೀರಾತು ವಿವಾಕ್ಕೀಡಾಗುವುದು ಸಾಮಾನ್ಯ ಎಂಬಂತಾಗಿದೆ.

ಈಗ ಅಂತಹದ್ದೇ ಸಂಕಷ್ಟಕ್ಕೆ ಸಿಲುಕಿದೆ ಪತಂಜಲಿ ಸಂಸ್ಥೆ. ಹೌದು ಹಾರ್ಪಿಕ್‌ ಕಂಪನಿ ತಯಾರಿಸಿದ್ದ ಟಾಯ್ಲೆಟ್‌ ಕ್ಲೀನರ್‌ ಜಾಹೀರಾತನ್ನೆ ಪತಂಜಲಿ ಅನುಸರಿಸಿದ್ದು, ಪತಂಜಲಿ ಜಾಹೀರಾತಿನಲ್ಲಿ ಟಾಯ್ಲೆಟ್‌ ಕ್ಲೀನ್‌ ಮಾಡುತ್ತೇನೆಂದು ಒಬ್ಬ  ವ್ಯಕ್ತಿ ಒಳಗೆ ಬರುತ್ತಾರೆ. ಆದರೆ ವ್ಯಕ್ತಿಯನ್ನ ಮಹಿಳೆ ಮನೆಯಿಂದ ಹೊರದಬ್ಬುತ್ತಾರೆ. ಬಳಿಕ ಪತಂಜಲಿ ಕಂಪನಯ ಗ್ರೀನ್‌ ಫ್ಲಶ್‌ ಆ್ಯಡ್‌ ಪ್ರಸಾರವಾಗುತ್ತದೆ. ಇದು ಹಾರ್ಪಿಕ್‌ ಕಂಪನಿ ವಿರುದ್ದವಾಗ ತೆಗೆದ ಜಾಹೀರಾತು ಎಂದು ಇದನ್ನು ನೋಡಿದಾಗ ಯಾರಿಗಾದರೂ ಅರ್ಥವಾಗುತ್ತದೆ.

ಆದರೆ ಈಗ ಹಾರ್ಪಿಕ್‌ ಕಂಪನಿ ಪತಂಜಲಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com