ಕಿರುತೆರೆ ಮೇಲೆ “ಮುಗುಳು ನಗೆ”ಯೊಂದಿಗೆ ಮೋಡಿ ಮಾಡಲು ಬರ್ತಿದ್ತಾರೆ ಗಣೇಶ್‌, ಭಟ್ಟರ ಜೋಡಿ

ಮುಗುಳುನಗೆಯೇ ನೀ ಹೇಳು, ಮುಗುಳು ನಗೆಯೇ ನೀ ಹೇಳು ಎಂದು ಮತ್ತೆ ದಶಕಗಳ ನಂತರ ಎಲ್ಲರ ಮುಖದಲ್ಲೂ ನಗು ಮೂಡಿಸಿದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಯೋಗರಾಜ್‌ ಭಟ್‌ ಅವರ ಜೋಡಿಯ ಮುಗುಳು ನಗೆ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

ವಿಭಿನ್ನ ಕಥೆಯಿರುವ, ನಾಲ್ವರು ನಟಿಯರಿರುವ ಈ ಸಿನಿಮಾ ಈಗಾಗಲೆ ಎಲ್ಲೆಡೆ ಅದ್ಭುತ ಪ್ರದರ್ಶನ ಕಂಡಿದ್ದು, ಈಗ ಕಿರುತೆರೆಯಲ್ಲಿ ಬರಲು ರೆಡಿಯಾಗಿದೆ. ವಿ. ಹರಿಕೃಷ್ಣ ಸಂಗೀತ ನಿರ್ದೇಶನದ 100ನೇ ಸಂಗೀತಮಯ ಸಿನಿಮಾ ಇದಾಗಿದೆ.

ಇದೇ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್‌ ಸಹ ಕಾಣಿಸಿಕೊಂಡಿದ್ದು, ಅಮರ ಹಳೆಯ ನೆನಪು ಹಾಡಿನ ಮೂಲಕ ಸಿನಿ ರಸಿಕರನ್ನು ರಂಜಿಸಿದ್ದಾರೆ. ಪಕ್ಕಾ ಫ್ಯಾಮಿಲಿ ಮನರಂಜನೆಯ ಮುಗುಳುನಗೆ ಸಿನಿಮಾ ಇದೇ ಜನವರಿ 27ರಂದು ಸಂಜೆ 4.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಚಿತ್ರಮಂದಿರಕ್ಕೆ ಹೋಗಿ ನೋಡಲು ಸಾಧ್ಯವಾಗದವರು ಮನೆಯಲ್ಲೇ ಕುಳಿತು ಸಿನಿಮಾ ನೋಡಬಹುದಾಗಿದೆ.

Leave a Reply

Your email address will not be published.