ಆಳ್ವಾಸ್‌ ವಿದ್ಯಾರ್ಥಿನಿ ರಚನಾ ಸಾವು ಪ್ರಕರಣ :ಆಕೆಯದ್ದು ಆತ್ಮಹತ್ಯೆಯಲ್ಲ ಕೊಲೆ ಎಂದ ಪೋಷಕರು

ಮೂಡಿಬಿದ್ರೆ : ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ರಚನಾ ಆತ್ಮಹತ್ಯೆ ಪ್ರಕರಣ ಸಂಬಂಧ ಪೋಷಕರು ಪ್ರತಿಕ್ರಿಯಿಸಿದ್ದು, ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ. ಅವಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ ಎಂದು ಪೋಷಕರು ಹೇಳಿದ್ದು, ಅವರ ಆಕ್ರಂದನ ಮುಗಿಲುಮುಟ್ಟಿದೆ.

ಗುರುವಾರ ಆಳ್ವಾಸ್‌ ಕಾಲೇಜಿನ ಮಹಡಿಯಿಂದ ಬಿದ್ದು ರಚನಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಲ್ಲದೆ ಆಕೆ ಡೆತ್‌ ನೋಟ್‌ ಬರೆದಿಟ್ಟಿದ್ದು, ಅದರಲ್ಲಿರುವ ಅಕ್ಷರ ಆಕೆಯದ್ದಲ್ಲ, ಸಹಿ ಸಹ ಆಕೆಯದ್ದಲ್ಲ. ಅವಳ ಆರೋಗ್ಯದಲ್ಲೂ ಇದುವರೆಗೆ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ ಈಗ ನಮ್ಮ ಮಗಳ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕ್ಯಾನ್ಸರ್‌ ಇದೆ. ಕಿಡ್ನಿ ಸಮಸ್ಯೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರೇ ನಮ್ಮ ಮಗಳನ್ನು ಕೊಂದು ಸತ್ಯ ಮರೆಮಾಚುತ್ತಿರುವುದಾಗಿ ಆರೋಪಿಸಿದ್ದಾರೆ.

ರಚನಾ ದೇಹದಲ್ಲಿ ಯಾವುದೇ ಗಾಯಗಳಿಲ್ಲ. ಐದನೇ ಮಹಡಿಯಿಂದ ಬಿದ್ದಿದ್ದರೆ ದೊಡ್ಡ ಗಾಯವಾಗಬೇಕಿತ್ತು. ಆದರೆ ಅವಳ ದೇಹದಲ್ಲಿ ಗಾಯವೇ ಇಲ್ಲ. ಖಂಡಿತವಾಗಿಯೂ ಇದೊಂದು ಕೊಲೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com