CM ಅಂತ ಹೇಳ್ಬೇಡಿ, ಸಿದ್ರಾಮಯ್ಯ ಕೇಳಿಸ್ಕೊಂಡ್ರೆ ಈಗಿರೋ ಸೀಟೂ ಕೈತಪ್ಪೀತು : ಡಿಕೆಶಿ

ಕೋಲಾರ : ಬಹಳ ಜನ ನನ್ನನ್ನು ಮುಂದಿನ ಮುಖ್ಯಮಂತ್ರಿ ಎನ್ನುತ್ತಾರೆ. ಆದರೆ ಅದನ್ನು ಜೋರಾಗಿ ಹೇಳಬೇಡಿ. ಸಿದ್ದರಾಮಯ್ಯ ಅದನ್ನು ಕೇಳಿಸಿಕೊಂಡರೆ ಇರೋ ಸೀಟೂ ಉಳಿಯೋದಿಲ್ಲ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್‌ ನಗುತ್ತಲೇ ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.

ನನಗೇನೂ ಅರ್ಜೆಂಟಿಲ್ಲ. ಶುಭ ಘಳಿಗೆಯನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಅವಕಾಶದ ಸೀಟು ಸಿಕ್ಕರೆ ನಾನು ಕುಳಿತು ಬಿಡುತ್ತೇನೆ ಎಂದಿದ್ದಾರೆ. ಕೊಟ್ಟ ಕುದುರೆಯನ್ನು ಏರದೆ ಮತ್ತೊಂದು ಕುದುರೆಯನ್ನು ಏರುವವನು ನಾನಲ್ಲ. ಅಂತಹವನು ವೀರನೂ ಅಲ್ಲ, ಶೂರನೂ ಇಲ್ಲ. ಅಧಿಕಾರ ಸಿಕ್ಕರೆ ಅದನ್ನು ಬಳಸಿಕೊಳ್ಳಬೇಕು. ಆ ಸಮಯ ಬಂದರೆ, ಜನರ ಆಶೀರ್ವಾದ ಇದ್ದರೆ ಮುಂದೊಂದು ದಿನ ನೋಡೋಣ ಎಂದಿದ್ದಾರೆ.

One thought on “CM ಅಂತ ಹೇಳ್ಬೇಡಿ, ಸಿದ್ರಾಮಯ್ಯ ಕೇಳಿಸ್ಕೊಂಡ್ರೆ ಈಗಿರೋ ಸೀಟೂ ಕೈತಪ್ಪೀತು : ಡಿಕೆಶಿ

  • January 26, 2018 at 5:43 PM
    Permalink

    ಈ ಮಾತು ಹೈಕಮಾಂಡ್ ನ ಇಂಗಿತ

    Reply

Leave a Reply

Your email address will not be published.

Social Media Auto Publish Powered By : XYZScripts.com