ಮಹದಾಯಿ ಮೇಲೆ ಕಣ್ಣಿಡಲು ನಾಲ್ವರು ಅಧಿಕಾರಿಗಳ ಸಮಿತಿ ರಚಿಸಿದ ಗೋವಾ ಸರ್ಕಾರ

ಪಣಜಿ : ಕರ್ನಾಟಕ ಕಾನೂನು ಬಾಹಿರವಾಗಿ ಮಹದಾಯಿ ನದಿ ಪಾತ್ರದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದೆ ಎಂದು ಇತ್ತೀಚೆಗಷ್ಟೇ ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್‌ ಆರೋಪಿಸಿದ್ದರು. ಅಲ್ಲದೆ ಮಹದಾಯಿ ವಿಚಾರವಾಗಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕರ್ನಾಟಕ ಬಂದ್‌ ಸಹ ಆಚರಿಸಲಾಗಿದ್ದು, ಈ ಮಧ್ಯೆಯೇ ಗೋವಾ ಸರ್ಕಾರ ಮಹದಾಯಿ ನದಿ ಪಾತ್ರದಲ್ಲಿ ನಡೆಯುವ ಯಾವುದೇ ಚಟುವಟಿಕೆಗಳ ಮೇಲೆ ಕಣ್ಣಿಡಲು ನಾಲ್ವರು ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿರುವುದಾಗಿ ತಿಳಿದುಬಂದಿದ್ದು. ಈ ಕುರಿತು ಗುರುವಾರ ಅಧಿಸೂಚನೆ ಹೊರಡಿಸಿದೆ.
ಗೋವಾ ಜಲ ಸಂಪನ್ಮೂಲ ಸಚಿವಾಲಯದ ನಾಲ್ವರು ಇಂಜಿನಿಯರ್‌ಗಳನ್ನೊಳಗೊಂಡ ಈ ಸಮಿತಿಯು, 15 ದಿನಕ್ಕೊಮ್ಮೆ ಗೋವಾ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ಅಲ್ಲದೆ ಇದಕ್ಕಾಗಿ ಈ ಸಮಿತಿ ವಾರಕ್ಕೆರಡು ಬಾರಿ ನದಿ ಪಾತ್ರಗಳಿಗೆ ತೆರಳಿ ಪರಿಸ್ಥಿತಿಯ ಮೇಲೆ ನಿಗಾ ಇಡುವಂತೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲೇಕರ್‌ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com